ಬೇಸಿಗೆ ರಂಗ ತರಬೇತಿ ಶಿಬಿರ ಏ. ೬ರಿಂದ

1 ckm 2 pratibha nanda kumar
ರಂಗಕರ್ಮಿ ಪ್ರತಿಭಾ ನಂದಕುಮಾರ್
Published on

ಚಿಕ್ಕಮಗಳೂರು: ತೆರೆಯ ಸಿರಿ ಕಲಾ ಪ್ರತಿಷ್ಠಾನ ಮತ್ತು ಕಲಾ ಸೇವಾ ಸಂಘದ ವತಿಯಿಂದ ಕೆಂಪನಹಳ್ಳಿ ಅಂದ ಮಕ್ಕಳ ವಸತಿ ಶಾಲೆಯಲ್ಲಿ ಬೇಸಿಗೆ ರಂಗ ತರಬೇತಿ ಶಿಬಿರವನ್ನು ಏ. ೬ ರಿಂದ ೨೮ರವರೆಗೆ ೨೩ ದಿನಗಳ ಕಾಲ ಆಯೋಜಿಸಲಾಗಿದೆ ಎಂದು ರಂಗಕರ್ಮಿ ಪ್ರತಿಭಾ ನಂದಕುಮಾರ್ ತಿಳಿಸಿದರು.

ನಗರದ ಪ್ರೆಸ್‌ಕ್ಲಬ್‌ನಲ್ಲಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ೬ ರಿಂದ ೧೬ ವರ್ಷದ ಮಕ್ಕಳಿಗಾಗಿ ಬೇಸಿಗೆ ರಂಗ ಶಿಬಿರ ಆಯೋಜಿಸಲಾಗಿದೆ. ಈ ಶಿಬಿರದಲ್ಲಿ ಮಕ್ಕಳು ಹೊಸ ಕೌಶಲ್ಯಗಳನ್ನು ಕಲಿಯಲು ಮತ್ತು ಬೆಳೆಯಲು ಸಹಾಯಕವಾಗಿದೆ. ನಾಟಕ, ರಂಗ ಸಂಗೀತ, ವಚನ ಗೀತೆ, ಜನಪದ ಗೀತೆ, ಭಕ್ತಿ ಗೀತೆ, ವೀರಗಾಸೆ, ಡೊಳ್ಳು ಕುಣಿತ, ಪಟ್ಟ ಕುಣಿತ, ಸೋಮನ ಕುಣಿತ, ನಂದಿಕೋಲು, ಪ್ರಸಾಧನ, ಮುಖವಾಡ ತಯಾರಿಕೆ, ರಂಗಾಟಗಳು, ನವರಸಾಭಿನಯ, ಕಥೆ ಕವನ, ಚಿತ್ರಕಲೆ, ದೇಹ ಭಾಷೆ ಮುಂತಾದ ರೋಮಾಂಚನಕಾರಿ ಚಟುವಟಿಕೆಗಳನ್ನು ಮಕ್ಕಳಿಗೆ ಕಲಿಸಲಾಗುತ್ತದೆ ಎಂದರು.

ಶಿಬಿರದಲ್ಲಿ ನೀನಾಸಂನ ಪ್ರತಿಭಾ, ಮಣಿಕಂಠ, ಸಾಣೆಹಳ್ಳಿಯ ಅಭಿಷೇಕ್, ಸಂಗೀತ ಶಿಕ್ಷಕರಾದ ಡಾ.ವಿಜಯ್ ಜನಪದ, ಪವಿತ್ರಾ ದೀಪಕ್ ಮಕ್ಕಳಿಗೆ ಬೋಧನೆ ಮಾಡಲಿದ್ದಾರೆ ಎಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ರಂಗಕರ್ಮಿಗಳಾದ ಚಂದ್ರಮೂರ್ತಿ, ಬಿಸಿಲೇಹಳ್ಳಿ ಸೋಮಶೇಖರ್, ದೀಪಕ್, ವೈಷ್ಣವಿ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net