ಬೇಸಾಯದಲ್ಲಿ ಆಧುನಿಕ ಪದ್ಧತಿ ಅಳವಡಿಸಿ

01
Published on

ಯಾದಗಿರಿ: ಗ್ರಾಮೀಣ ಭಾಗದ ರೈತರು ಸ್ವಾಭಿಮಾನದಿಂದ ಜೀವನ ಸಾಗಿಸುವ ನಿಟ್ಟಿನಲ್ಲಿ ಸರಕಾರ ಸಾಕಷ್ಟು ಯೋಜನೆಗಳನ್ನು ಜಾರಿಗೆ ತರುತ್ತಿದ್ದು, ಇದರ ಸದುಪಯೋಗ ಪಡೆದುಕೊಳ್ಳುವಂತೆ ಶಾಸಕ ಶರಣಗೌಡ ಕಂದಕೂರ ಸಲಹೆ ನೀಡಿದರು.

ನಗರದ ಶಾಸಕರ ಕಚೇರಿಯಲ್ಲಿ ಶನಿವಾರ ಮಹಷರ್ಿ ವಾಲ್ಮೀಕಿ ಅಭಿವೃದ್ಧಿ ನಿಗಮದಿಂದ 2019-20 ಮತ್ತು 2021ನೇ ಸಾಲಿನ ಗಂಗಾಕಲ್ಯಾಣ ಯೋಜನೆ ಗುರುಮಠಕಲ್ ಕ್ಷೇತ್ರದ ಫಲಾನುಭವಿಗಳಿಗೆ ಪಂಪ್ಸೆಟ್ ಪರಿಕರಗಳನ್ನು ಹಸ್ತಾಂತರಿಸಿ ಮಾತನಾಡಿ, ಬೇಸಾಯದಲ್ಲಿ ಆಧುನಿಕ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ರೈತರು ಆಥರ್ಿಕವಾಗಿ ಸದೃಢರಾಗಬೇಕು ಎಂದು ಕಿವಿಮಾತು ಹೇಳಿದರು.

ಗುರುಮಠಕಲ್ ಕ್ಷೇತ್ರದಲ್ಲಿ ನದಿಗಳಿಲ್ಲ. ಕೆರೆ ಮತ್ತು ಹಳ್ಳಗಳೇ ಕೃಷಿಗೆ ಆಧಾರವಾಗಿವೆ. ಸರಕಾರ ಗಂಗಾಕಲ್ಯಾಣ ಯೋಜನೆ ಮೂಲಕ ಸಣ್ಣ ಮತ್ತು ಆಥರ್ಿಕವಾಗಿ ದುರ್ಬಲ ವರ್ಗಕ್ಕೆ ಬೋರವೆಲ್ ಕೊರೆಸಿ, ವಿದ್ಯುತ್ ಸಂಪರ್ಕ ಕಲ್ಪಿಸಿಕೊಡುತ್ತಿದೆ. ಇದರ ಸೌಲಭ್ಯ ಪಡೆದುಕೊಂಡವರು ಕಠಿಣ ಪರಿಶ್ರಮದಿಂದ ಜೀವನದಲ್ಲಿ ಮುಂದೆ ಬರಬೇಕು ಎಂದರು.

ಗ್ರಾಮೀಣ ಭಾಗದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಮೂಲಸೌಲಭ್ಯಕ್ಕೆ ಹೆಚ್ಚಿನ ಒತ್ತು ನೀಡುತ್ತಿದ್ದೇನೆ. ಕೆಕೆಆರ್ಡಿಬಿ ಅನುದಾನದಿಂದ ಶಾಲೆಗಳ ನವೀಕರಣ, ಹೊಸ ಕೋಣೆಗಳ ನಿಮರ್ಾಣ, ರಸ್ತೆ ಹಾಗೂ ಚರಂಡಿಗಳ ನಿಮರ್ಾಣಕ್ಕೆ ಹೆಚ್ಚಿನ ಗಮನ ನೀಡಲಾಗುವುದು ಎಂದು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net