ಬೇಸರ ಮರೆಯಲು ಹಾಸ್ಯ ನಾಟಕ ಔಷಧಿ

31 vikram 3
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಒತ್ತಡದ ಬದುಕಿನಲ್ಲಿ ನಗೆ ಬಹು ಮುಖ್ಯ. ಅದು ಜೀವನದ ಜಂಜಡದಿಂದ ಕೆಲ ಹೊತ್ತಾದರೂ ನಮ್ಮನ್ನು ನೆಮ್ಮದಿ ಬದುಕಿತ್ತ ಸಾಗಿಸುತ್ತದೆ ಎಂದು ಕವಿವಿ ಕುಲಪತಿ ಡಾ. ಕೆ.ಬಿ.ಗುಡಸಿ ಹೇಳಿದರು.
ನಗರದ ಪಂ. ಪುಟ್ಟರಾಜ ಗವಾಯಿಗಳ ಕಲಾ ಪ್ರತಿಷ್ಠಾನ ವತಿಯಿಂದ ಸೃಜನ ರಂಗ ಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಗುರು ಇನ್ಸ್ಟಿಟ್ಯೂಟ್ ಹುಬ್ಬಳ್ಳಿ ತಂಡದ ‘ಸೂಪರ್ ಸಂಸಾರ’ ನಾಟಕ ಪ್ರದರ್ಶನದಲ್ಲಿ ಕಲಾವಿದರಿಗೆ ಸನ್ಮಾನಿಸಿ ಅವರು ಮಾತನಾಡಿದರು.
ಅತಿಥಿಗಳಾಗಿ ನ್ಯಾಯವಾದಿ ಶೇಖರ ಕವಳಿ, ಅಶೋಕ ಶೆಟ್ಟರ, ರತ್ನಗಂಗಾ ಸಂಸ್ಥೆ ಅಧ್ಯಕ್ಷೆ ಸಂಗೀತಾ ಹಿರೇಮಠ, ಕಾರ್ಯದರ್ಶಿ ಸವಿತಾ ಹಿರೇಮಠ ಭಾಗವಹಿಸಿದ್ದರು. ಪ್ರತಿಷ್ಠಾನದ ಅಧ್ಯಕ್ಷ ಎಂ.ಎಸ್ ಫರಾಸ್ ಅಧ್ಯಕ್ಷತೆ ವಹಿಸಿದ್ದರು.
ಮರಾಠಿಯ ಪ್ರಸಿದ್ಧ ನಾಟಕಕಾರ ಸಂತೋಷ ಪವಾರ್ ರಚಿಸಿದ ನಾಟಕವನ್ನು ಡಾ.ಯಶವಂತ ಸರದೇಶಪಾಂಡೆ ಅನುವಾದಿಸಿ, ನಿರ್ದೇಶಿಸಿದ್ದಾರೆ. ರವಿ ಕುಲಕರ್ಣಿ, ಮಾಲತಿ ಸರದೇಶಪಾಂಡೆ, ಪೂಜಾಮಣಿ ಜಹಗೀರದಾರ, ಶಿಲ್ಪಾ ಪಾಂಡೆ, ಕಿಟ್ಟಿ ಗಾಂವ್ಕರ್, ಪ್ರದೀಪ ಮುಧೋಳ, ಯಶವಂತ ಸರದೇಶಪಾಂಡೆ ನಟನೆಯಲ್ಲಿ ನಗುವಿನ ಹೊಳೆ ಹರಿಸಿದರು.
ಶ್ರೀಶೈಲ ಚಿಕನಳ್ಳಿ ಸ್ವಾಗತಿಸಿದರು. ಮಾರ್ತಾಂಡಪ್ಪ ಕತ್ತಿ ನಿರೂಪಿಸಿದರು. ಪ್ರೇಮಾನಂಧ ಶಿಂಧೆ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net