

ಸೋಮವಾರಪೇಟೆ: ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಬೇಳೂರು ಹಾಗೂ ಅರಣ್ಯ ಇಲಾಖೆ ವತಿಯಿಂದ ಬೇಳೂರು ಶಾಲೆಯ ಪಕ್ಕದ ಅರಣ್ಯ ಪ್ರದೇಶದಲ್ಲಿ ಗುರುವಾರ ಬೀಜ ಬಿತ್ತನೆ ಮಾಡಲಾಯಿತು.
ಶಾಲೆಯ ಮುಖ್ಯಶಿಕ್ಷಕರಾದ ಶಿವಕುಮಾರ್ ಮಾತನಾಡಿ, ಅರಣ್ಯ ರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿ. ಪ್ರಕೃತಿ ಉಳಿದರೆ ಮಾತ್ರ ಜೀವಸಂಕುಲ ಉಳಿಯುತ್ತದೆ. ವಿದ್ಯಾರ್ಥಿ ದೆಸೆಯಿಂದಲೇ ಪರಿಸರ ಕಾಳಜಿ ಇರಬೇಕು. ವಿದ್ಯಾರ್ಥಿಗಳಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದರು.
ಡಿಆರ್‌ಎಫ್‌ಒ ನಾರಾಯಣ ಮೂಲ್ಯ, ಇಲಾಖೆ ಸಿಬ್ಬಂದಿ ಚೇತನ್, ವಿಜಯ್ ವಾಸು ಇದ್ದರು. ವಿದ್ಯಾರ್ಥಿಗಳು ಅರಣ್ಯದೊಳಗೆ ಸಸ್ಯ ಬೀಜ ಬಿತ್ತಿದರು.