ಬೇಲೂರು ಬಾಲಕಿಯರ ಪ್ರೌಢಶಾಲೆಗೆ ಸಮಗ್ರ ಪ್ರಶಸ್ತಿ

5blrp5
2022-23 ನೇ ಸಾಲಿನ ವಲಯ ಮಟ್ಟದ ಬಿ ವಿಭಾಗದ ಕ್ರೀಡಾ ಕೂಟದಲ್ಲಿ ಸಮಗ್ರ ಪ್ರಶಸ್ತಿ ಪಡೆದ ಬೇಲೂರು ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳೊಂದಿಗೆ ಚಂದ್ರಶೇಖರ್, ರವೀಂದ್ರ ಕುಮಾರ್ ಇದ್ದರು.
Published on

ಬೇಲೂರು: ಸಾರ್ವಜನಿಕ ಶಿಕ್ಷಣ ಇಲಾಖೆಯ 2022-23ನೇ ಸಾಲಿನ ವಲಯ ಮಟ್ಟದ ಬಿ ವಿಭಾಗದ ಕ್ರೀಡಾಕೂಟದಲ್ಲಿ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರೌಢಶಾಲಾ ವಿಭಾಗದ ವಿದ್ಯಾರ್ಥಿಗಳು ಸಮಗ್ರ ಪ್ರಶಸ್ತಿ ತನ್ನದಾಗಿಸಿ ಕೊಳ್ಳುವ ಮೂಲಕ ಉತ್ತಮ ಸಾಧನೆ ಮಾಡಿದ್ದಾರೆ ಎಂದು ಮುಖ್ಯಶಿಕ್ಷಕ ಚಂದ್ರಶೇಖರ್ ಹೇಳಿದರು.


ಕ್ರೀಡಾಕೂಟದಲ್ಲಿ ವಿಜೇತರಾದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಮಾತನಾಡಿದರು. ದೈಹಿಕ ಶಿಕ್ಷಣ ಶಿಕ್ಷಕ ರವೀಂದ್ರಕುಮಾರ್ ಮಾತನಾಡಿ, ವಲಯ ಮಟ್ಟದ ಕ್ರೀಡಾಕೂಟದಲ್ಲಿ ವೈಯಕ್ತಿಕ ವಿಭಾಗದಲ್ಲಿ ಮೇಘನಾ 3000 ಮೀ., 1500 ಮೀ. ಪ್ರಥಮ ಹಾಗೂ 800 ಮೀ. ದ್ವಿತೀಯ ಸ್ಥಾನ, ಅಂಕಿತಾ 800 ಮೀ. ಪ್ರಥಮ, 3000 ಮೀ., 1500 ಮೀ. ದ್ವಿತೀಯ, ಪ್ರಕೃತಿ ಉದ್ದ ಜಿಗಿತ ಪ್ರಥಮ, 100 ಮೀ., 200 ಮೀ. ಓಟದಲ್ಲಿ ತೃತೀಯ, ಶ್ವೇತಾ ಎತ್ತರ ಜಿಗಿತ ತೃತೀಯ ಸ್ಥಾನ ಪಡೆದಿದ್ದಾಳೆ.


ಗುಂಪು ಸ್ಪರ್ಧೆಗಳಲ್ಲಿ ಕಬಡ್ಡಿ ಪ್ರಥಮ, ಥ್ರೋಬಾಲ್ ದ್ವಿತೀಯ ಸ್ಥಾನ ಪಡೆದಿದ್ದಲ್ಲದೆ ಒಟ್ಟು 47 ಅಂಕಗಳಿಕೆಯೊಂದಿಗೆ ಬಾಲಕಿಯರ ವಿಭಾಗದಲ್ಲಿ ಸಮಗ್ರ ಪ್ರಶಸ್ತಿ ಪಡೆದಿದ್ದಾರೆ ಎಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net