ಬೇಲೂರು ದೇಗುಲಕ್ಕೆ ಕೇಂದ್ರ ಸಚಿವರ ಭೇಟಿ

9blrp4
Published on

ಬೇಲೂರು: ಇತಿಹಾಸ ಪ್ರಸಿದ್ಧ ವಿಶ್ವ ವಿಖ್ಯಾತ ಬೇಲೂರಿನ ಶ್ರೀ ಚನ್ನಕೇಶವ ದೇಗುಲಕ್ಕೆ ಕೇಂದ್ರ ವಸತಿ ನಗರಾಭಿವೃದ್ಧಿ ಮತ್ತು ಪೆಟ್ರೋಲಿಯಂ ಸಚಿವ ಹರ್ದೀಪ್‌ಸಿಂಗ್ ಪುರಿ ಮಂಗಳವಾರ ಭೇಟಿ ನೀಡಿ ದೇವರ ದರ್ಶನ ಪಡೆದರು.


ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬೇಲೂರಿನ ಚನ್ನಕೇಶವಸ್ವಾಮಿ ದೇಗುಲದಲ್ಲಿನ ಶಿಲ್ಪಕಲೆ ವೀಕ್ಷಿಸಿ, ದೇವರ ದರ್ಶನ ಪಡೆದಿದ್ದೇನೆ. ಬೇಲೂರು ಮತ್ತು ಹಳೇಬೀಡು ದೇಗುಲಗಳು ವಿಶ್ವ ಪಾರಂಪರಿಕ ಪಟ್ಟಿಗೆ ಸೇರ್ಪಡೆಯಾಗಿರುವುದರಿಂದ ಜಾಗತಿಕ ಮನ್ನಣೆ ದೊರೆತಿದೆ ಎಂದರು.


ಇದೇ ಸಂದರ್ಭ ಕೇಂದ್ರ ಸಚಿವರಿಗೆ ಶ್ರೀ ಚನ್ನಕೇಶವಸ್ವಾಮಿ ದೇಗುಲ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ ಮತ್ತು ಸದಸ್ಯರು ಸಂಪ್ರದಾಯದಂತೆ ಹಿಂದಿನಿಂದಲೂ ಆಯೋಜಿಸಿತ್ತಾ ಬಂದಿರುವ ಕೋಠಾರೋತ್ಸವಕ್ಕೆ ಪುರಾತತ್ವ ಇಲಾಖೆ ಅಧಿಕಾರಿಗಳು ಅಡ್ಡಿ ಪಡಿಸುತಿದ್ದಾರೆ ಎಂದು ಲಿಖಿತ ದೂರು ನೀಡಿದರು.


ಈ ಬಗ್ಗೆ ಮಾತನಾಡಿದ ಸಚಿವರು, ಎಲ್ಲಿಯೇ ಆದರೂ ಅಯಾ ಪ್ರದೇಶದಲ್ಲಿ ನಡೆದು ಬಂದ ಧಾರ್ಮಿಕ ಕಾರ್ಯಕ್ರಮಕ್ಕೆ ಹಾಗೂ ಭಾವನೆಗೆ ಧಕ್ಕೆ ತರಬಾರದು. ಈ ನಿಟ್ಟಿನಲ್ಲಿ ನಾನು ದೆಹಲಿಗೆ ತೆರಳಿದ ನಂತರ ಸಂಬಂಧಿಸಿದ ಮಂತ್ರಿಗಳೊಂದಿಗೆ ಚರ್ಚಿಸಿ ಸಮಸ್ಯೆ ಬಗೆಹರಿಸಲು ಪ್ರಯತ್ನಿಸುವುದಾಗಿ ಭರವಸೆ ನೀಡಿದರು.


ಶಾಸಕ ಎಚ್.ಕೆ.ಸುರೇಶ್, ಪುರಸಭೆ ಅಧ್ಯಕ್ಷೆ ತೀರ್ಥಕುಮಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net