

ಹುಲಸೂರು: ಬೇಲೂರು ಗ್ರಾಮ ಪಂಚಾಯಿತಿ ಎರಡನೇ ಅವಧಿಗೆ ಅಧ್ಯಕ್ಷೆಯಾಗಿ ಕರುಣಾಬಾಯಿ ಪರೆಪ್ಪ, ಉಪಾಧ್ಯಕ್ಷೆಯಾಗಿ ಮಲ್ಲಮ್ಮ ಸೋನಕೆರೆ ಆಯ್ಕೆಯಾಗಿದ್ದಾರೆ. ೨೦ ಸದಸ್ಯ ಬಲದ ಗ್ರಾಪಂನಲ್ಲಿ ಅಧ್ಯಕ್ಷ ಸ್ಥಾನ ಸಾಮಾನ್ಯ ಮಹಿಳೆ, ಉಪಾಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡ ಮಹಿಳೆಗೆ ಮೀಸಲಾಗಿತ್ತು. ತಲಾ ಒಂದೇ ನಾಮಪತ್ರ ಸಲ್ಲಿಕೆಯಾದ್ದರಿಂದ ಚುನಾವಣಾಧಿಕಾರಿ ತಹಸೀಲ್ದಾರ್ ಶಿವಾನಂದ ಮೇತ್ರೆ ಫಲಿತಾಂಶ ಘೋಷಿಸಿದರು. ೧೮ ಸದಸ್ಯರು ಉಪಸ್ಥಿತರಿದ್ದರು. ತಾಪಂ ಎ.ಡಿ.ಮಹಾದೇವ ಜಮ್ಮು, ಪಿಡಿಒ ಬಸವರಾಜ ರೋಗಿ ಇದ್ದರು. ಫಲಿತಾಂಶ ಘೋಷಣೆ ನಂತರ ಮುಖಂಡರು, ಬೆಂಬಲಿಗರು ವಿಜಯೋತ್ಸವ ಆಚರಿಸಿ ಅಧ್ಯಕ್ಷ, ಉಪಾಧ್ಯಕ್ಷರನ್ನು ಸನ್ಮಾನಿಸಿದರು. ಜಿಪಂ ಮಾಜಿ ಸದಸ್ಯ ಗುಂಡುರೆಡ್ಡಿ ಕಮಲಾಪುರೆ, ಪ್ರಮುಖರಾದ ಹುಲೆಪ್ಪ ಮಹಾಜನ್, ರವೀಂದ್ರ ಗುಂಗೆ, ಧೂಳಪ್ಪ ಕಾಮಣ್ಣ, ಅನೀಲ ಪರೆಪ್ಪ, ಸುನೀಲ ಪರೆಪ್ಪ, ಸುಶಾಂತ ಅಳ್ಳೆ, ಪಪ್ಪು ಉದಾನೆ, ಅಪ್ಪು ಮಡಿಕೆ, ನವೀನ ಗುಂಗೆ, ಅರುಣಕುಮಾರ ಮಹಾಜನ್, ಮಹಾದೇವ ಮಹಾಜನ್, ಸಿದ್ದು ಹಾವಣ್ಣ ಇತರರಿದ್ದರು.