ಬೇಲೂರಿನಲ್ಲಿ ಪ್ರತ್ಯೇಕ ಎರಡು ಕಳ್ಳತನ ಪ್ರಕರಣ: ಲಕ್ಷಾಂತರ ರೂ ಕಳವು

THEFT
Published on

   ಬೇಲೂರು: ತಾಲೂಕಿನಲ್ಲಿ ಎರಡು ಕಡೆ ಒಂದೇ ದಿನ ಪ್ರತ್ಯೇಕ ಮನೆ ಕಳ್ಳತನ ಪ್ರಕರಣದಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದು ದೋಚಿ ಪರಾರಿಯಾಗಿರುವ ಘಟನೆ ಶನಿವಾರ ನಡೆದಿದೆ.

ತಾಲೂಕಿನ ಬಳ್ಳೂರು ಗ್ರಾಮದ ಮೋಹನ್ ಕುಮಾರ್ ಅವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಕೆಲಸಕ್ಕೆಂದು ತೆರಳಿದ್ದ ಸಂದರ್ಭದಲ್ಲಿ ಯಾರು ಖದೀಮರು ಮನೆಯ ಹಿಂಭಾಗಲಿನ ಚಿಲಕ ಮರಿದು ಮನೆ ಪ್ರವೇಶಿಸಿ ಚಿನ್ನಾಭರಣ ಕದ್ದು ಪದಾರಿಯಾಗಿದ್ದು, ಮಧ್ಯಾಹ್ನ ಮನೆಗೆ ಬಂದು ನೋಡಿದಾಗ ಕಳ್ಳತನವಾಗಿರುವುದಾಗಿ ತಿಳಿದುಬಂದಿದೆ.

ಮನೆಯ ಬೀಗ ಮುರಿದು ಬೀರುವಿನಲ್ಲಿದ್ದಂತಹ 5 ಗ್ರಾಂ ತೂಕದ ಒಂದು ಜೊತೆ ಓಲೆ ಮತ್ತು 3ಉಂಗುರ, 2 ಗ್ರಾಂ ತೂಕದ ಮಾಟಿ, 30 ಗ್ರಾಂ ಬೆಳ್ಳಿಯ ಉಡುದಾರ ಸರಿ ಒಟ್ಟು 60 ಗ್ರಾಂ ಚಿನ್ನಾಭರಣ 50ಸಾವಿರ ನಗದು ಕಳ್ಳತನ ಮಾಡಿದ್ದಾರೆ.

ಮತ್ತೊಂದು ಪ್ರಕರಣದಲ್ಲಿ ತಾಲೂಕಿನ ಕೊನೆರಲು ಗ್ರಾಮದ ತಮ್ಮಣ್ಣಗೌಡ ಅವರು ತಮ್ಮ ಮನೆಗೆ ಬೀಗ ಹಾಕಿಕೊಂಡು ಮೈಸೂರಿಗೆ ಚಿಕಿತ್ಸೆಗಾಗಿ ತೆರಳಿದ್ದರು.ಮನೆಯಲ್ಲಿ ಯಾರು ಇಲ್ಲದ ಸಂದರ್ಭದಲ್ಲಿ ಮನೆಯ ಬೀಗ ಮುರಿದು ಬಿರುವಿನಲ್ಲಿದ್ದಂತಹ 12 ಗ್ರಾಂ ತೂಕದ ಚಿನ್ನದ ಸರ ಮತ್ತು ಎರಡು ಜೊತೆ ಓಲೆ, 6 ಗ್ರಾಂ ತೂಕದ ಉಂಗುರ ಸೇರಿ ಒಟ್ಟು 1,35,000 ಬೆಲೆಬಾಳುವ ಚಿನ್ನಾಭರಣ ಹಾಗೂ 55ಸಾವಿರ ನಗದನ್ನು ದೋಚಿದ್ದಾರೆ

ಎರಡು ಕಳ್ಳತನ ಪ್ರಕರಣಕ್ಕೆ ಸಂಬಂಧಿಸಿದಂತೆ ಭಾನುವಾರ ಬೇಲೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net