ಬೇಲೂರಿನಲ್ಲಿ ಅದ್ದೂರಿ ಹನುಮಂತೋತ್ಸವ

3blrp1.
Published on

ಬೇಲೂರು: ಶ್ರೀ ಚನ್ನಕೇಶವಸ್ವಾಮಿ ಬ್ರಹ್ಮ ರಥೋತ್ಸವದ ಅಂಗವಾಗಿ ಹನುಮಂತೋತ್ಸವ ಭಾನುವಾರ ರಾತ್ರಿ ಅದ್ದೂರಿಯಾಗಿ ಜರುಗಿತು.


ಶ್ರೀ ಚನ್ನಕೇಶವಸ್ವಾಮಿ ಜಾತ್ರಾ ಮಹೋತ್ಸವದ 7ನೇ ದಿನದ ಅಂಗವಾಗಿ ಶ್ರೀ ಚನ್ನಕೇಶವಸ್ವಾಮಿ ಹಾಗೂ ಸೌಮ್ಯಾನಾಯಕಿ ಮತ್ತು ರಂಗನಾಯಕಿ ಅಮ್ಮನವರ ಉತ್ಸವ ಮೂರ್ತಿಯನ್ನು ಹನುಮಂತನ ವಾಹನದಲ್ಲಿ ಕೂರಿಸಿ ವಿದ್ಯುತ್ ದೀಪ ಹಾಗೂ ವಿವಿಧ ಪುಷ್ಪಗಳಿಂದ ಸಿಂಗರಿಸಿ, ಪಟ್ಟಣದ ಲಕ್ಷ್ಮೀಪುರ ಬಡಾವಣೆ ಜನರು ಹೂವಿನ ಹಾರವನ್ನು ಆಂಜನೇಯ ಮೂರ್ತಿಗೆ ಅರ್ಪಿಸಿದ ನಂತರ ನಾಡಗೌಡರ ಸಮ್ಮುಖದಲ್ಲಿ ಮಂಗಳವಾದ್ಯ, ಕೊಂಬು ಕಹಳೆಯೊಂದಿಗೆ ಮಹಾ ಮಂಗಳಾರತಿ ಸೇರಿದಂತೆ ಪೂಜಾ ವಿಧಿವಿಧಾನಗಳನ್ನು ಅರ್ಚಕರು ನೆರವೇರಿಸಿದರು. ನಂತರ ಬೀದಿಗಳಲ್ಲಿ ಮೆರವಣಿಗೆ ಮಾಡಲಾಯಿತು.


ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಡಾ.ನಾರಾಯಣಸ್ವಾಮಿ, ಇಒ ವಿದ್ಯುಲತಾ, ಸಮಿತಿ ಸದಸ್ಯರಾದ ವಿಜಯಲಕ್ಷ್ಮೀ, ನಾಲ್ಕು ಮೂಲೆ ಅಡ್ಡೆಗಾರರು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net