ಬೇಲೂರಿನ ಕರ್ಣ ಜೋಡೆತ್ತಿಗೆ ಪ್ರಥಮ ಸ್ಥಾನ

28blrp2
ಬೆಂಗಳೂರಿನ ಕೋಲಾರ ಹೈವೇ ಪಕ್ಕದ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಒಡೆತನದ ಮೈದಾನದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದ ಜೋಡೆತ್ತುಗಳೊಂದಿಗೆ ಅಭಿಮಾನಿಗಳು
Published on

ಬೇಲೂರು: ಬೆಂಗಳೂರಿನ ಕೋಲಾರ ಹೆದ್ದಾರಿ ರಸ್ತೆ ಪಕ್ಕದ ಮೈದಾನದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಅಂತಾರಾಜ್ಯ ಮಟ್ಟದ ಹಳ್ಳಿಕಾರ್ ತಳಿ ಜೋಡೆತ್ತುಗಳ ಓಟದ ಸ್ಪರ್ಧೆಯಲ್ಲಿ ಬೇಲೂರು ತಾಲೂಕಿನ ಮುತ್ತುಗನ್ನೆ ಗ್ರಾಮದ ಕರ್ಣ ಹೆಸರಿನ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆದಿವೆ.

ನ.27ರಂದು ವರ್ತೂರು ಸಂತೋಷ್ ನೇತೃತ್ವದಲ್ಲಿ ಆಯೋಜಿಸಿದ್ದ ಸ್ಪರ್ಧೆಯಲ್ಲಿ ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶ, ಕರ್ನಾಟಕ ಸೇರಿದಂತೆ ಹಳ್ಳಿಕಾರ್ ತಳಿಗಳ ಜೋಡಿ ಎತ್ತುಗಳ ಓಟದ ಸ್ಪರ್ಧೆಯಲ್ಲಿ ಸಾಕಷ್ಟು ತಂಡಗಳು ಭಾಗವಹಿಸಿದ್ದವು. ಇದರಲ್ಲಿ ಅಂತಿಮವಾಗಿ ಬೇಲೂರು ತಾಲೂಕಿನ ಮುತ್ತುಗನ್ನೆ ಗ್ರಾಮದ ಮಹೇಶ್ ಅವರಿಗೆ ಸೇರಿದ ಕರ್ಣ ಎಂಬ ಹೆಸರಿನ ಜೋಡೆತ್ತುಗಳು ಪ್ರಥಮ ಸ್ಥಾನ ಪಡೆಯುವ ಮೂಲಕ ಪ್ರಥಮ ಬಹುಮಾನವಾಗಿ 20 ಗ್ರಾಂ ಚಿನ್ನ, ಒಂದು ಕೆಜಿ ಬೆಳ್ಳಿ ಹಾಗೂ ಒಂದು ಲಕ್ಷ ರೂ., ನಗದು ಮತ್ತು ಆಕರ್ಷಕ ಟ್ರೋಫಿ ಪಡೆಯುವ ಮೂಲಕ ಜಿಲ್ಲೆಗೆ ಕೀರ್ತಿ ತಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net