ಬೇಲೂರಲ್ಲಿ ದಸರಾ ಧರ್ಮ ಸಮ್ಮೇಳನ 26ರಿಂದ, ಬಾಳೆಹೊನ್ನೂರು ಡಾ. ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರು ಮಾಹಿತಿ

h16- RAMBHAPURI 2
Published on

ವಿಜಯವಾಣಿ ಸುದ್ದಿಜಾಲ ಹುಬ್ಬಳ್ಳಿ

ಬಾಳೆಹೊನ್ನೂರು ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳ 31ನೇ ದಸರಾ ಧರ್ಮ ಸಮ್ಮೇಳನ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 5ರ ವರೆಗೆ ಹಾಸನ ಜಿಲ್ಲೆ ಬೇಲೂರು ತಾಲೂಕು ಕೇಂದ್ರದಲ್ಲಿ ಏರ್ಪಡಿಸಲಾಗಿದೆ.

ಪ್ರತಿ ದಿನ ಸಂಜೆ 7 ಗಂಟೆಗೆ ದಸರಾ ಕಾರ್ಯಕ್ರಮಗಳು ಆರಂಭಗೊಳ್ಳಲಿದ್ದು, 26ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಉತ್ಸವ ಉದ್ಘಾಟಿಸಲಿದ್ದಾರೆ. ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರು ಶ್ರೀ ಸೋಮೇಶ್ವರ ಸಂದೇಶಾಮೃತ ಕೃತಿ ಬಿಡುಗಡೆ ಮಾಡುವರು ಎಂದು ರಂಭಾಪುರಿ ಪೀಠದಲ್ಲಿ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಬಾಳೆಹೊನ್ನೂರು ಡಾ. ಶ್ರೀ ರಂಭಾಪುರಿ ವೀರಸೋಮೇಶ್ವರ ಜಗದ್ಗುರುಗಳು ತಿಳಿಸಿದರು.

ಭಾವತರಂಗ ಕೃತಿಯನ್ನು ಪುಷ್ಪಗಿರಿ ಸಂಸ್ಥಾನಮಠದ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಬಿಡುಗಡೆ ಮಾಡುವರು. ಅತಿಥಿಗಳಾಗಿ ಅಬಕಾರಿ ಸಚಿವ ಗೋಪಾಲಯ್ಯ, ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎಂ.ಪಿ. ರೇಣುಕಾಚಾರ್ಯ, ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ಅಧ್ಯಕ್ಷ ಬಿ.ಎಸ್. ಪರಮಶಿವಯ್ಯ, ಶಾಸಕರಾದ ಬೆಳ್ಳಿ ಪ್ರಕಾಶ (ಕಡೂರು), ಡಿ.ವಿ. ಸುರೇಶ (ತರೀಕೆರೆ), ಹಾಸನ ಡಿಸಿ ಎಂ.ಎಸ್. ಅರ್ಚನಾ, ಎಸ್​ಪಿ ಹರಿರಾಮ ಶಂಕರ್, ಜಿಪಂ ಸಿಇಒ ಕಾಂತರಾಜ್ ಪಾಲ್ಗೊಳ್ಳುವರು ಎಂದರು.

ಸೆ. 27ರಂದು ನಡೆಯುವ ಕಾರ್ಯಕ್ರಮಗಳಲ್ಲಿ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ, ವಿಧಾನ ಪರಿಷತ್ ಮಾಜಿ ಸಭಾಪತಿ ಬಿ.ಎಲ್. ಶಂಕರ್, ಮಾಜಿ ಸಚಿವ ಬಿ. ಶಿವರಾಂ, ಶಾಸಕರಾದ ಈಶ್ವರ ಖಂಡ್ರೆ, ಆರ್. ಮಂಜುನಾಥ, ಟಿ.ಡಿ. ರಾಜೇಗೌಡ, ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ, ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಶಿವಾನಂದ ತಗಡೂರ ಭಾಗವಹಿಸುವರು.

ಪ್ರಶಸ್ತಿ ಪ್ರದಾನ:

ಈ ವರ್ಷದ ರಂಭಾಪುರಿ ಯುವಸಿರಿ ಪ್ರಶಸ್ತಿಯನ್ನು ಅಖಿಲ ಭಾರತ ವೀರಶೈವ ವೇದಿಕೆ ಅಧ್ಯಕ್ಷ ಜಯಂತಕುಮಾರ, ಸಾಹಿತ್ಯ ಸಿರಿ ಪ್ರಶಸ್ತಿಯನ್ನು ಹಂಪಿಯ ವಾಮದೇವ ಮಹಂತ ಶಿವಾಚಾರ್ಯ ಸ್ವಾಮೀಜಿಯವರಿಗೆ, ವೀರಶೈವ ಸಿರಿ ಪ್ರಶಸ್ತಿಯನ್ನು ಹಾಸನ ವೀರಶೈವ ಸಂಘದ ಅಧ್ಯಕ್ಷ ಬಿ.ಪಿ. ಐಸ್ವಾಮಿಗೌಡರಿಗೆ, ಸಾಧನ ಸಿರಿ ಪ್ರಶಸ್ತಿಯನ್ನು ಹೆಚ್ಚುವರಿ ಕೃಷಿ ನಿರ್ದೇಶಕ ಎಂ.ಎಸ್. ದಿವಾಕರ ಅವರಿಗೆ, ಶಿವಾಚಾರ್ಯ ರತ್ನ ಪ್ರಶಸ್ತಿಯನ್ನು ಹುಲಿಕೆರೆ ದೊಡ್ಡಮಠದ ವಿರೂಪಾಕ್ಷಲಿಂಗ ಶಿವಾಚಾರ್ಯ ಸ್ವಾಮೀಜಿಯವರಿಗೆ ಪ್ರದಾನ ಮಾಡಲಾಗುವುದು.

ಉಪನ್ಯಾಸ:

9 ದಿನ ನಡೆಯುವ ಸಮಾರಂಭದಲ್ಲಿ ಲಕ್ಷೆ್ಮೕಶ್ವರದ ಡಾ. ಜಯಶ್ರೀ ಮಲ್ಲಿಕಾರ್ಜುನ ಹೊಸಮನಿ, ಬೆಳ್ಳಾವರದ ಬಿ.ಕೆ. ಚಂದ್ರಕಲಾ, ಚಿಕ್ಕಮಗಳೂರಿನ ಚಟ್ನಳ್ಳಿ ಮಹೇಶ, ಮೈಸೂರಿನ ಎ.ಆರ್. ರಘುರಾಮ್ ಮೂಗುತಿಹಳ್ಳಿ ಚಂದ್ರಶೇಖರ ನಾರಣಾಪುರ, ಅಣ್ಣಿಗೇರಿಯ ಡಾ. ಎ.ಸಿ. ವಾಲಿ, ಚಿತ್ರದುರ್ಗದ ಡಾ. ಎಚ್.ಕೆ.ಎಸ್. ಸ್ವಾಮಿ, ಶಿವಮೊಗ್ಗದ ಡಾ. ಹಾ.ಮಾ. ನಾಗಾರ್ಜುನ ಇವರು ವಿವಿಧ ವಿಷಯಗಳ ಮೇಲೆ ಉಪನ್ಯಾಸ ನೀಡುವರು. ಸೆ. 25ರಂದು ಸಂಜೆ 5ಕ್ಕೆ ಅಲಂಕೃತ ಸಾರೋಟ ಮೂಲಕ ರಂಭಾಪುರಿ ಜಗದ್ಗುರುಗಳ ಶುಭಾಗಮನವಾಗಲಿದ್ದು, ಸ್ವಾಗತ ಸಮಾರಂಭ ನಡೆಯಲಿದೆ.

ಇಷ್ಟಲಿಂಗ ಮಹಾಪೂಜೆ:

ವಿಶ್ವಶಾಂತಿಗಾಗಿ ನಿತ್ಯ ಬೆಳಗ್ಗೆ 8ಕ್ಕೆ ಬೇಲೂರು ವೀರಶೈವ ಕಲ್ಯಾಣ ಮಂಟಪದಲ್ಲಿ ರಂಭಾಪುರಿ ಜಗದ್ಗುರುಗಳ ಇಷ್ಟಲಿಂಗ ಮಹಾಪೂಜೆ ನಡೆಯಲಿದೆ ಎಂದು ಶ್ರೀಗಳು ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net