ಬೇಲೂರ ಭವಾನಿ ಉತ್ಸವಕ್ಕೆ ಸಿದ್ಧತೆ

DSC01949_1
Published on

ಹುಲಸೂರು: ಜೈಭವಾನಿ ದೇವಸ್ಥಾನದ ಜಾತ್ರಾ ಮಹೋತ್ಸವ ನಿಮಿತ್ತ ಬೇಲೂರ ಗ್ರಾಮದಲ್ಲಿ ಭರ್ಜರಿ ಸಿದ್ಧತೆಗಳು ನಡೆದಿದ್ದು, ಗ್ರಾಮದೆಲ್ಲೆಡೆ ಕಟೌಟ್‌ಗಳು, ಧ್ವಜಗಳು ರಾರಾಜಿಸುತ್ತಿದ್ದು, ಭವಾನಿ ದೇವಸ್ಥಾನವನ್ನು ದೀಪಗಳಿಂದ ಅಲಂಕಾರ ಮಾಡಿದ್ದು, ಬುಧವಾರದಿಂದ ಅ.೨೮ರವರೆಗೆ ವೈವಿಧ್ಯಮಯ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ.

ನಾಲ್ಕು ದಿನ ನಡೆಯುವ ಕಾರ್ಯಕ್ರಮಕ್ಕೆ ಸಕಲ ಸಿದ್ಧತೆ ಮಾಡಿಕೊಂಡಿದ್ದು, ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿ ನಾಲ್ಕು ಸಾವಿರ ಜನ ಕುಳಿತುಕೊಳ್ಳುವ ಭವ್ಯ ಮಂಟಪ ನಿರ್ಮಿಸಲಾಗಿದೆ.

ಬುಧವಾರ ಸಂಜೆ ೬ಕ್ಕೆ ರಾಷ್ಟ್ರೀಯ ಜಾನಪದ ಮೇಳ ನಡೆಯಲಿದೆ. ಕೇಂದ್ರ ಸಚಿವ ಭಗವಂತ ಖೂಬಾ ಉದ್ಘಾಟಿಸಲಿದ್ದು, ಮಠಾಧೀಶರು, ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ವಿವಿಧ ರಾಜ್ಯದ ಕಲಾವಿದರು ಕಲಾ ಪ್ರದರ್ಶನ ಮಾಡಲಿದ್ದಾರೆ. ಗುರುವಾರ ಸಂಜೆ ೬ಕ್ಕೆ ಜಿಲ್ಲೆಯ ನೂತನ ಶಾಸಕ, ಸಚಿವರಿಗೆ ಸನ್ಮಾನ, ಕಲಾ ಸಿಂಚನ ಮೆಲೋಡಿಸ್ ಕಲಾವಿದರಾದ ಹನುಮಂತ ಲಮಾಣಿ, ಸಂಜು ಬಸ್ಯಾ, ಪಲ್ಲವಿ ಬಳ್ಳಾರಿ ಅವರಿಂದ ಸಂಗೀತ, ಹಾಸ್ಯ ರಸಮಂಜರಿ ನಡೆಯಲಿದೆ.

ಅ.೨೭ರಂದು ವಿವಿಧ ಮಠಾಧೀಶರು, ಸಾಹಿತಿಗಳು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಸದ್ಭಾವ ಗೋಷ್ಠಿ, ಭರತ ನಾಟ್ಯ, ಜಾನಪದ ನೃತ್ಯ ನಡೆಯಲಿದೆ. ಇಂದುಮತಿ ಸಾಲಿಮಠ, ಗುಂಡಣ್ಣ ಡಿಗ್ಗಿ ಅವರಿಂದ ಹಾಸ್ಯ ಸಂಜೆ ನಡೆಯಲಿದೆ. ಅ.೨೮.ರಂದು ಬೆಳಗ್ಗೆ ೯ಕ್ಕೆ ಆನೆ ಮೇಲೆ ಅಂಬಾರಿಯ ಅದ್ದೂರಿ ಮೆರವಣಿಗೆ ನಡೆಯಲಿದೆ. ಪುಣೆ ಹಾಗೂ ಸೋಲಾಪುರ ನಗರದ ಕಲಾವಿದರಿಂದ ಡೋಲ್ ತಾಜಾ ಸೇರಿ ಹತ್ತಾರು ಕಲಾ ತಂಡಗಳಿAದ ಭವ್ಯ ಮೆರವಣಿಗೆ ನಡೆಯಲಿದೆ. ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಬೇಕು ಎಂದು ಉಸ್ತುವಾರಿ ಸಮಿತಿ ಅಧ್ಯಕ್ಷ ಸೂರ್ಯಕಾಂತ ಚಿಲ್ಲಾಬಟ್ಟೆ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net