ಬೇಲಿಮಲ್ಲೂರು ಗ್ರಾಪಂ ಗಾದಿ ಕಮಲಮ್ಮ ತೆಕ್ಕೆಗೆ

hnl belimalluru gp election aug 7
Published on

ಹೊನ್ನಾಳಿ: ತಾಲೂಕಿನ ಬೇಲಿಮಲ್ಲೂರು ಗ್ರಾಪಂನ ನೂತನ ಅಧ್ಯಕ್ಷರಾಗಿ ಕಮಲಮ್ಮ ಹಾಲೇಶ್‌ಗೌಡ್ರು ಹಾಗೂ ಉಪಾಧ್ಯಕ್ಷರಾಗಿ ಚಂದ್ರಪ್ಪ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ಅಧ್ಯಕ್ಷ ಸ್ಥಾನಕ್ಕೆ ಬಿಸಿಎಂ (ಬಿ) ಮಹಿಳೆ ಹಾಗೂ ಉಪಾಧ್ಯಕ್ಷ ಸ್ಥಾನಕ್ಕೆ ಬಿಸಿಎಂ (ಎ) ಮೀಸಲಿದ್ದು, ಕ್ರಮವಾಗಿ ಕಮಲಮ್ಮ ಹಾಗೂ ಚಂದ್ರಪ್ಪ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಹೀಗಾಗಿ ಚುನಾವಣಾಧಿಕಾರಿ ರಾಜ್‌ಕುಮಾರ್ ಅವಿರೋಧ ಆಯ್ಕೆ ಘೋಷಿಸಿದರು.
ಗ್ರಾಪಂ ಮಾಜಿ ಅಧ್ಯಕ್ಷೆ ಮಂಜಮ್ಮ ಸಿದ್ದಪ್ಪ, ಸವಿತಾ ಹಾಲೇಶಪ್ಪ, ಮಾಜಿ ಉಪಾಧ್ಯಕ್ಷ ಅಣ್ಣಪ್ಪ, ನೀಲಮ್ಮ, ಶಾಂತಾಬಾಯಿ, ರತ್ನಮ್ಮ, ಸದಸ್ಯರಾದ ಹನುಮಂತಪ್ಪ, ಗೀತಾ, ಹನುಮಂತಪ್ಪ, ಪಿಡಿಒ ಅರುಣಕುಮಾರ್ ಹಾಗೂ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net