ಬೇರೆ ಮಾರ್ಗದಲ್ಲಿ ಚಲಿಸಲು ಮನವಿ

Published on

ಚಾಮರಾಜನಗರ: ಜಿಲ್ಲೆಯ ಸಮೀಪದಲ್ಲೇ ಇರುವ ತಮಿಳುನಾಡಿನ ಈರೋಡ್ ಜಿಲ್ಲೆಯ ಬಣ್ಣಾರಿ ಅಮ್ಮನ ದೇಗುಲದಲ್ಲಿ ಏ.7ರ ಬೆಳಗ್ಗೆ 9 ಗಂಟೆಯಿಂದ ಏ.8ರ ಸಂಜೆ 6 ಗಂಟೆಯವರೆಗೆ ಕೊಂಡಾರೋಹಣ ಜಾತ್ರೆ ಇರುವುದರಿಂದ ಬೇರೆ ಮಾರ್ಗದಲ್ಲಿ ಚಲಿಸಲು ಈರೋಡ್ ಜಿಲ್ಲೆಯ ಪೊಲೀಸ್ ಇಲಾಖೆ ಸೂಚನೆ ನೀಡಿದ್ದಾರೆ

ಮೈಸೂರು ಮಾರ್ಗದಿಂದ ಹಾಸನೂರು, ದಿಂಬಂ, ಬಣ್ಣಾರಿಗೆ ಬರುವ ಎಲ್ಲ ಬಗೆಯ ವಾಹನಗಳು ಹಾಗೂ ಹಾಸನೂರು, ದಿಂಬ, ಬಣ್ಣಾರಿ ಮಾರ್ಗವಾಗಿ ಕೊಯಮತ್ತೂರು, ಮೇಟುಪಾಳ್ಯ, ಈರೋಡಿಗೆ ಹೋಗುವ ವಾಹನಗಳು ಬೇರೆ ಮಾರ್ಗವಾಗಿ ಚಲಿಸುವಂತೆ ವಿನಂತಿಸಿಕೊಂಡಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net