ಬೇರೆ ಜೈಲಿಗೆ ಸ್ಥಳಾಂತರಕ್ಕೆ ದರ್ಶನ್ ಬೇಡಿಕೆ

Published on

ಬಳ್ಳಾರಿ : ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದ ಆರೋಪಿ ದರ್ಶನ್ ಇಲ್ಲಿನ ಕೇಂದ್ರ ಕಾರಾಗೃಹದಿಂದ ಬೇರೆ ಜೈಲಿಗೆ ಸ್ಥಳಾಂತರ ಮಾಡಿ ಎಂದು ಜೈಲು ಅಧಿಕಾರಿಗಳ ಬಳಿ ಬೇಡಿಕೆ ಇಟ್ಟಿದ್ದಾರೆ.
ಇಲ್ಲಿನ ಕೇಂದ್ರ ಕಾರಾಗೃಹಕ್ಕೆ ದರ್ಶನ್ ಪತ್ನಿ ವಿಜಯಲಕ್ಷ್ಮೀ, ಸಹೋದರ ತೂಗುದೀಪ ಹಾಗೂ ವಕೀಲರ ಜತೆ ಗುರುವಾರ ಭೇಟಿ ನೀಡಿದ್ದರು. ಸಂಜೆ 4 ಗಂಟೆಗೆ ವಕೀಲರ ಭೇಟಿಗೆ ಬರುವಾಗ ಹಾಗೂ ವಾಪಸ್ ಸೆಲ್‌ಗೆ ಹೋಗುವ ವೇಳೆ ಮಾಧ್ಯಮಗಳಿಗೆ ಮಧ್ಯೆದ ಬೆರಳು ಸನ್ನೆ ಮೂಲಕ ತೋರಿದ್ದು ವಿವಾದಕ್ಕೀಡಾಗಿತ್ತು. ಇದರ ಬಗ್ಗೆ ಜೈಲು ಅಧಿಕಾರಿಗಳು ದರ್ಶನ್ ಪ್ರಶ್ನಿಸಿದ್ದಾರೆ. ಅದಕ್ಕೆ, ನೀವು ಕೊಡುವ ಅರ್ಧ ಗಂಟೆಯಲ್ಲಿ ವಕೀಲರ ಜತೆ ಏನು ಮಾತನಾಡಬೇಕು ಎಂದು ಚಿಂತೆಯಲ್ಲಿ ಬಂದಿರುವೆ. ನನ್ನ ಎದುರಿಗೆ ಮಾಧ್ಯಮದವರು ಇರುವುದು ಗೊತ್ತು, ಅವರು ಯಾರು ಎನ್ನುವುದೆ ಗೊತ್ತಿಲ್ಲ. ನನ್ನ ಪಾಡಿಗೆ ನಾನಿರುವೆ, ಈ ವಿವಾದಕ್ಕೂ ನನಗೂ ಸಂಬಂಧವಿಲ್ಲ. ನಿಮಗೆ ತೊಂದರೆಯಾಗಿದ್ದಾರೆ, ರಾಜ್ಯದ ಬೇರೆ ಯಾವ ಜೈಲಿಗಳಿಗೂ ಅದರೂ ನನ್ನನ್ನು ಸ್ಥಳಾಂತರ ಮಾಡಿ ಅಲ್ಲಿಗೆ ಹೋಗಿರುವೆ ಎಂದು ದರ್ಶನ್ ಜೈಲು ಅಧಿಕಾರಿಗಳಿಗೆ ಉತ್ತರಿಸಿ ಸಮರ್ಥಿಸಿಕೊಂಡಿದ್ದಾರೆ. ಜೈಲು ನಿಯಮದಂತೆ ಟಿವಿ ನೀಡಿ ಎಂದು ನಿತ್ಯ ಕೇಳುತ್ತಿದ್ದಾರೆ. ಟಿವಿ ದುರಸ್ತಿ ಕಾರ್ಯ ನಡೆಯುತ್ತಿರುವುದರಿಂದ ತಡವಾಗಿದೆ. ಆದರೆ, ದರ್ಶನ್ ಜೈಲು ಸಿಬ್ಬಂದಿ ಬಳಿ ಟಿವಿಗಾಗಿ ಕಿರಿಕ್ ಮಾಡಿಲ್ಲ ಎಂದು ಜೈಲು ಅಧಿಕಾರಿಗಳು ತಿಳಿಸಿದರು. ನಿತ್ಯ ಅರ್ಧಗಂಟೆ ಬೆಳಗ್ಗೆ ಹಾಗೂ ಸಂಜೆ ಹೈ ಸೆಕ್ಯೂರಿಟಿ ಸೆಲ್ ಬಳಿ ವಾಕ್ ಮಾಡಲು ಅನುಮತಿ ನೀಡಲಾಗಿದೆ. ಬೆರಳು ಸನ್ನೆಯ ವಿವಾದ ಬಗ್ಗೆ ಜೈಲಿನ ಮೇಲಾಧಿಕಾರಿಗಳಿಗೆ ತಿಳಿಸಲಾಗಿದೆ ಎಂದು ಜೈಲು ಅಧೀಕ್ಷಕಿ ಲತಾ ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net