ಬೇರು ಮಟ್ಟದಿಂದ ಪಕ್ಷ ಸಂಘಟಿಸೋಣ

BJP
Published on

ಯಾದಗಿರಿ: ಮುಂಬರುವ ವಿಧಾನಸಭೆ ಚುನಾವಣೆ ದೃಷ್ಠಿಯಿಂದ ಬೂತ್ ಮಟ್ಟದಲ್ಲಿ ಪಕ್ಷ ಸಂಘಟನೆ ಮಾಡಲು ಪ್ರತಿಯೊಬ್ಬ ಕಾರ್ಯಕರ್ತರು ಸಜ್ಜಾಗುವಂತೆ ಶಾಸಕ ವೆಂಕಟರಡ್ಡಿ ಮುದ್ನಾಳ್ ಸಲಹೆ ನೀಡಿದರು.

ನಗರದ ಜಿಲ್ಲಾ ಬಿಜೆಪಿ ಕಾಯರ್ಾಲಯದಲ್ಲಿ ಸೋಮವಾರ ಆಯೋಜಿಸಿದ್ದ ಜಿಲ್ಲಾ ಪ್ರಕೋಷ್ಠಗಳ ಸಂಚಾಲಕ, ಸಹ ಸಂಚಾಲಕರ ಸಭೆ ಉದ್ಘಾಟಿಸಿ ಮಾತನಾಡಿ, ಕಾರ್ಯಕರ್ತರ ಬಲ ನಮ್ಮ ಪಕ್ಷ ಈ ಮಟ್ಟಿಗೆ ಬೆಳೆದು ನಿಂತಿದೆ. ಮುಂಬರುವ ಜಿಪಂ ಹಾಗೂ ತಾಪಂ ಚುನಾವಣೆ ಗುರಿ ಇಟ್ಟುಕೊಂಡು ಪಕ್ಷದ ಸಂಘಟನೆ ಮಾಡಲಾಗುತ್ತಿದೆ ಎಂದರು.

ಪಕ್ಷದ ಜಿಲ್ಲಾ ಪ್ರಭಾರಿ ಅಮರನಾಥ ಪಾಟೀಲ ಮಾತನಾಡಿ, ರಾಷ್ಟ್ರಭಕ್ತಿ, ದೇಶಸೇವೆ, ಶಿಸ್ತು ಹಾಗೂ ಸಂಯಮ ಇವುಗಳು ಪಕ್ಷದ ಸಿದ್ಧಾಂತಗಳಲ್ಲಿ ಪ್ರಮುಖವಾಗಿವೆ. ನಮ್ಮ ಕಾರ್ಯಕರ್ತರು ಶಿಸ್ತಿನ ಸಿಪಾಯಿಗಳಾಗಿ ಕೆಲಸ ಮಾಡುತ್ತಿದ್ದಾರೆ ಎಂಬ ಹೆಮ್ಮೆ ನಮಗಿದೆ. ಕೋವಿಡ್ ಲಸಿಕೆ ನೀಡಿಕೆ, ಸೇವಾ ಕಾರ್ಯಗಳನ್ನು ಈ ಹಿಂದೆ ಪಕ್ಷ ಹಮ್ಮಿಕೊಂಡಿತ್ತು. ವಿವಿಧ ಯೋಜನೆಗಳಡಿ ಫಲಾನುಭವಿಗಳಿಗೆ ಪ್ರಯೋಜನ ಲಭಿಸಲು ಪಕ್ಷ ಶ್ರಮಿಸಿದೆ. ಇವೆಲ್ಲವುಗಳು ಮತಗಳಾಗಿ ಪರಿವರ್ತನೆ ಮಾಡುವುದು ಸಧ್ಯ ನಮ್ಮ ಮುಂದಿರುವ ಗುರಿ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net