ಬೇಡಿಕೆಯನ್ವಯ ಪುಸ್ತಕ ಪೂರೈಕೆ

28blrp3
ಹೆಬ್ಬಾಳು ಗ್ರಾಮದಲ್ಲಿ ಗ್ರಂಥ ಸಂಸ್ಕೃತಿಯ ಏಳಿಗೆ-ನಮ್ಮ ಪುಸ್ತಕ ದೇಣಿಗೆ ಅಭಿಯಾನದಲ್ಲಿ ವಿದ್ಯಾರ್ಥಿಗಳು ಮತ್ತು ಗಣ್ಯರು ಭಾಗವಹಿಸಿದ್ದರು.
Published on


ಬೇಲೂರು: ರಾಷ್ಟ್ರೀಯ ಗ್ರಂಥಾಲಯ ದಿನಾಚರಣೆ ಅಂಗವಾಗಿ ಜಿಲ್ಲಾ, ತಾಲೂಕು ಪಂಚಾಯಿತಿ ಹಾಗೂ ಹೆಬ್ಬಾಳು ಗ್ರಾಮ ಪಂಚಾಯಿತಿ ಗ್ರಂಥಾಲಯದ ಸಹಯೋಗದಲ್ಲಿ ಗ್ರಂಥ ಸಂಸ್ಕೃತಿಯ ಏಳಿಗೆ-ನಮ್ಮ ಪುಸ್ತಕ ದೇಣಿಗೆ ಅಭಿಯಾನಕ್ಕೆ ತಾಲೂಕಿನ ಹೆಬ್ಬಾಳು ಗ್ರಾಮದಲ್ಲಿ ತಾಲೂಕು ಪಂಚಾಯಿತಿ ಇಒ ಸುನಿತಾ ಮಂಗಳವಾರ ಚಾಲನೆ ನೀಡಿದರು.


ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗ್ರಂಥಾಲಯಗಳು ಪಂಚಾಯತ್ ರಾಜ್ ವ್ಯವಸ್ಥೆಯಡಿ ಬರುವ ಕಾರಣ ಗ್ರಂಥಾಲಯದ ಸರ್ವತೋಮುಖ ಅಭಿವೃದ್ಧಿ ಆಯಾ ಪಂಚಾಯಿತಿಗೆ ಸೇರಿದೆ. ವಿದ್ಯಾರ್ಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಅಗತ್ಯ ಪುಸ್ತಕಗಳನ್ನು ಪೂರೈಸುವ ಹೊಣೆಗಾರಿಕೆ ಇರುವ ಕಾರಣದಿಂದ ಬೇಡಿಕೆಯನ್ವಯ ಪೂರೈಕೆ ಮಾಡಲಾಗುತ್ತದೆ ಎಂದರು.


ಯೂನಿಯನ್ ಬ್ಯಾಂಕ್ ವ್ಯವಸ್ಥಾಪಕಿ ಕಮಲಾಕ್ಷಿ ಮಾತನಾಡಿದರು. ಗ್ರಾಮ ಪಂಚಾಯಿತಿ ಅಧ್ಯಕ್ಷ ಹಾಲೇಗೌಡ, ಅಭಿವೃದ್ಧಿ ಅಧಿಕಾರಿ ಅವಿನಾಶ್, ಕಸಾಪ ಮಾಜಿ ಗೌರವ ಕಾರ್ಯದರ್ಶಿ ಹೆಬ್ಬಾಳು ಹಾಲಪ್ಪ, ಗ್ರಾಪಂ ಸದಸ್ಯರಾದ ಎಚ್.ಆರ್.ಗಿರೀಶ್. ನಾಗರಾಜು, ಪ್ರತಿಮಾ, ಗೋಪಾಲ್, ಗ್ರಂಥಪಾಲಕ ಮಂಜೇಗೌಡ, ರಂಗಸ್ವಾಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net