ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಬಿಸಿಯೂಟ ತಯಾಕರ ಪ್ರತಿಭಟನೆ

CTD 16 BISIYOOTA-02
Published on

ಚಿತ್ರದುರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಎಐಟಿಯುಸಿ ಹಾಗೂ ರಾಜ್ಯಅಕ್ಷರ ದಾಸೋಹ ಬಿಸಿಯೂಟ ತಯಾರಕರ ಫೆಡರೇಷನ್ ಜಿ ಲ್ಲಾ ಸಮಿತಿ ನೇತೃತ್ವದಲ್ಲಿ ಬಿಸಿಯೂಟ ತಯಾರಕರು ನಗರದಲ್ಲಿ ಶನಿವಾರ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪ್ರವಾಸಿ ಮಂ ದಿರದಿಂದ ಜಿಲ್ಲಾಧಿಕಾರಿ ಕಚೇರಿಯವರೆಗೆ ಮೆರವಣಿಗೆ ನಡೆಸಿದ ಪ್ರತಿಭಟನಾಕಾರರು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು.
ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಜಿ.ಸಿ.ಸುರೇಶ್‌ಬಾಬು ಮಾತನಾಡಿ,ಸೇವಾ ಭದ್ರತೆ ಇಲ್ಲದೆ ಕೆಲಸ ಮಾಡುತ್ತಿರುವ ಬಿಸಿಯೂಟ ತಯಾರಕರಿಗೆ ವಿಧಾನಸಭಾ ಚುನಾವಣೆ ಪೂರ್ವ ಕೊಟ್ಟಿದ್ದ ಭರವಸೆಯನ್ನು ರಾಜ್ಯಸರ್ಕಾರ ಕೂಡಲೇ ಈಡೇರಿಸಬೇಕು. ಅಡುಗೆ ತ ಯಾರಿಸುವಾಗ ಮೃತಪಟ್ಟಿರುವ(2022)ಕೊಪ್ಪಳ ತಾಲೂಕಿನ ದೇವಮ್ಮ ಹಾಗೂ ಮುಂಡಗೋಡ ತಾಲೂಕಿನ ಅನ್ನಪೂರ್ಣಮ್ಮ ಅವರ ನೊಂದ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡ ಬೇಕೆಂದು ಆಗ್ರಹಿಸಿದರು.
ಎಐಟಿಯುಸಿ ಚಳ್ಳಕೆರೆ ತಾಲೂಕು ಅಧ್ಯಕ್ಷ ದೊಡ್ಡ ಉಳ್ಳಾರ್ತಿ ಕರಿಯಣ್ಣ ಮಾತನಾಡಿ,ಬಿಸಿಯೂಟ ತಯಾರಿಸುವಾಗ ಗಾಯಗೊಂಡಿ ರುವ ಎಲ್ಲರಿಗೂ ಒಂದು ಲಕ್ಷ ರೂ.ಪರಿಹಾರ ಕೊಡಬೇಕು. ಮೊದಲಿದ್ದ ತೆ ಮುಖ್ಯಶಿಕ್ಷಕರು ಮತ್ತು ಅಡುಗೆಯವರ ಜಂಟಿ ಬ್ಯಾಂಕ್ ಖಾತೆ ಮುಂದುವರಿಸಬೇಕು. ಹೆಚ್ಚುವರಿ ಮಾಸಿಕ ಒಂದು ಸಾವಿರ ರೂ.ಗಳನ್ನು ಕಳೆದ ಜೂನ್‌ನಿಂದ ಪೂರ್ವಾನ್ವಯಗೊಳಿಸಿ ಪಾವತಿಸ ಬೇಕೆಂದು ಒತ್ತಾಯಿಸಿದರು.
ಎಐಟಿಯುಸಿ ರಾಜ್ಯಉಪಾಧ್ಯಕ್ಷ ಟಿ.ಆರ್.ಉಮಾಪತಿ,ಜಿಲ್ಲಾ ಗೌರವಾಧ್ಯಕ್ಷ ಶಿವರುದ್ರಪ್ಪ,ಜಿಲ್ಲಾಧ್ಯಕ್ಷ ಬಿ.ಬಸವರಾಜಪ್ಪ,ಇ.ಸತ್ಯಕೀರ್ತಿ, ಎಂ.ಬಿ.ಜಯದೇವಮೂರ್ತಿ,ಪಿ.ತಿಪ್ಪೇಸ್ವಾಮಿ,ಬಿ.ರಾಜಪ್ಪ,ಪರವಿನ್‌ತಾಜ್,ವಿಶಾಲಾಕ್ಷಮ್ಮ,ಆರ್.ಎಚ್.ಜಯಲಕ್ಷ್ಮೀ,ರಜೀಯಾ,ಸುವ ರ್ಣಮ್ಮ ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net