ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆ

PHOTO-1--02
Published on


ಚಿತ್ರದುರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಕರ್ನಾಟಕ ಕಟ್ಟಡ ಕಟ್ಟುವ ಕಲ್ಲು ಒಡೆಯುವ ಕ್ವಾರಿ ಕಾರ್ಮಿಕರ ಸಂಘಟನೆ ನೇತೃತ್ವದಲ್ಲಿ ಕಾರ್ಮಿಕರು ನಗರದ ಡಿಸಿ ಕಚೇರಿ ಬಳಿ ಪ್ರತಿಭಟಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಎಐಟಿಯುಸಿ ಜಿಲ್ಲಾ ಪ್ರಧಾನ ಕಾರ‌್ಯದರ್ಶಿ ಜಿ.ಸಿ.ಸುರೇಶ್‌ಬಾಬು,ದೇಶದಲ್ಲಿ ಅಂದಾಜು 80 ಕೋಟಿ ಅ ಸ ಂಘಟಿತ ಕಟ್ಟಡ ಕಾರ್ಮಿಕರಿದ್ದಾರೆ. ಹಿಂದಿನ ಬಿಜೆಪಿ ಸರ್ಕಾರ,ಕಾರ್ಮಿಕರಿಗೆಂದು ಮೀಸಲಿಟ್ಟಿದ್ದ ಸಾವಿರಾರು ಕೋಟಿ ರೂ.ಗಳನ್ನು ದು ರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.
ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಧನ ಸಹಾಯವನ್ನು ಕೂಡಲೇ ಬಿಡುಗಡೆ ಮಾಡಬೇಕು. ನಿವೇಶನ ಖರೀದಿ ಮತ್ತು ಮನೆ ನಿರ್ಮಿಸಲು ಈಗಿರುವ 5 ಲಕ್ಷ ರೂ.ಆರ್ಥಿಕ ನೆರವನ್ನು 10 ಲಕ್ಷರೂ.ಗೆ ಹೆಚ್ಚಿಸ ಬೇಕೆಂದರು. ಎಐಟಿಯುಸಿ ರಾಜ್ಯಉಪಾಧ್ಯಕ್ಷ ಟಿ.ಆರ್.ಉಮಾಪತಿ ಮಾತನಾಡಿ,ನೋಂದಾಯಿತ ಕಟ್ಟಡ ಕಾರ್ಮಿಕರ ನೊಂದಣಿ ಕಾರ್ಡ್‌ನ್ನು ಮೊದಲಿನಂತೆ 3 ವರ್ಷಗಳಿಗೆ ಒಮ್ಮೆ ನವೀಕರಿಸುವುದು ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು.
ಸಂಘಟನೆ ತಾಲೂಕು ಅಧ್ಯಕ್ಷ ರಾಜಪ್ಪ,ಪ್ರಧಾನ ಕಾರ‌್ಯದರ್ಶಿ ಇ.ಸತ್ಯಕೀರ್ತಿ,ಎಸ್.ಬಾಬು,ರವಿಕುಮಾರ್,ತಿಪ್ಪೇಸ್ವಾಮಿ,ಮುಜಿಮಲ್ ಅಹಮದ್,ಸೋಮಶೇಖರ್,ಮಲ್ಲಪ್ಪ,ನುಸ್ರುಲ್ಲಾ,ಪ್ರಭು,ಮಹಮದ್‌ರಫಿಕ್,ಶಶಿಧರ್,ಶಶಿಕುಮಾರ್,ವಿಶಾಲಮ್ಮ,ವಿಜಯಕುಮಾರ್, ಬಸವರಾಜ್‌ನಾಯ್ಕ,ಎಂ.ಬಿ.ಜಯದೇವಮೂರ್ತಿ,ಪಾಪಯ್ಯ,ಶಿವಕುಮಾರ್ ಮತ್ತಿತರರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net