

ಚಿತ್ರದುರ್ಗ: ನೋಂದಾಯಿತ ಕಟ್ಟಡ ಕಾರ್ಮಿಕರ ಮಕ್ಕಳಿಗೆ ತ್ವರಿತವಾಗಿ ವಿದ್ಯಾರ್ಥಿವೇತನ ಬಿಡುಗಡೆ ಮಾಡುವುದು ಸೇರಿದಂತೆ ನಾನಾ ಬೇಡಿಕೆಗಳ ಈಡೇ ರಿಕೆಗೆ ಆಗ್ರಹಿಸಿ ರಾಜ್ಯಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಮಂಗಳವಾರ ಡಿಸಿ ಕಚೇರಿ ಬಳಿ ಪ್ರತಿಭ ಟಿಸಿದರು.
ಕಾರ್ಮಿಕರಿಗೆ ಉಚಿತವಾಗಿ ನೀಡಿರುವ ಎಲ್ಲ ಯೋಜನೆಗಳನ್ನು ತನಿಖೆಗೆ ಒಳಪಡಿಸಬೇಕು. 2022-23ನೇ ಶೈಕ್ಷಣಿಕ ಸಾಲಿನ ವಿದ್ಯಾರ್ಥಿವೇತನ ಈವರೆಗೂ ಜಮಾ ಆಗಿಲ್ಲ. ಸೆಸ್ ವಸೂಲಿ ಕಾಯ್ದೆ ಅಸಮಪರ್ಕ ಜಾರಿಯಿಂದ ಕಾರ್ಮಿಕರ ಕಲ್ಯಾಣ ಮಂಡಳಿಗೆ ಅಂದಾಜು 10 ಸಾವಿರ ಕೋಟಿ ರೂ.ವಸೂಲಿ ಬಾಕಿ ಉಳಿದಿದ್ದು,ಸೆಸ್ ಸಮರ್ಪಕ ವಸೂಲಿಗೆಂದೇ ಪ್ರತ್ಯೇಕ ಪ್ರಾಧಿಕಾರದ ರಚನೆಗೆ ಆಗ್ರಹಿಸಿದರು.
ಕಾರ್ಮಿಕರ ನವೀಕರಣಕ್ಕೆ ವೇತನ ಚೀಟಿ ಕಡ್ಡಾಯ ಮಾಡಿರುವುದರಿಂದ ನಕಲಿ ನೋಂದಣಿ ಗುರುತಿನ ಚೀಟಿ ಪತ್ತೆಗೆ ನೆರವಾಗಲಿದೆ. ರಾಜ್ಯದಲ್ಲಿ ನೋಂದಾಯಿತ 44.28 ಲಕ್ಷ ಕಾರ್ಮಿಕರಲ್ಲಿ ಶೇ.50 ಬೋಗಸ್ ಇದ್ದಾರೆಂದು ದೂರಿದರು. ಕಾರ್ಮಿಕರಿಗೆ ವಸತಿ ಸೌಕರ್ಯ ಕಲ್ಪಿಸುವ ರಾಜ್ಯ ಸ ರ್ಕಾರದ ನಿರ್ಧಾರ ಸ್ವಾಗತಾರ್ಹವಾಗಿದ್ದು,ವಸತಿ ರಹಿತ ಕಾರ್ಮಿಕರಿಗೆ ವಸತಿ ಒದಗಿಸುವುದು,ಟೈಲ್ಸ್ ಮತ್ತು ಗ್ರಾನೈಟ್ ಕೆಲಸಗಾರರಿಗೆ ಕಿಟ್ ವಿ ತರಣೆ ಸೇರಿದಂತೆ ಹಲವು ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.
ರಾಜ್ಯಕಟ್ಟಡ ಹಾಗೂ ಇತರೆ ನಿರ್ಮಾಣ ಕಾರ್ಮಿಕರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಜೆ.ಮಜುನಾಥ,ಪ್ರಧಾನ ಕಾರ‌್ಯದರ್ಶಿ ವೈ.ಕುಮಾರ್,ಕೆ. ಗೌಸ್‌ಪೀರ್,ನರಸಿಂಹಸ್ವಾಮಿ,ನಾದಿಆಲಿ,ಈಶ್ವರಪ್ಪ, ಫೈರೋಜ್,ಪ್ರಸನ್ನ,ಗೌಸ್‌ಖಾನ್,ರಾಜಣ್ಣ,ತಿಮ್ಮಯ್ಯ,ರಾಜಪ್ಪ ಮತ್ತಿತರರು ಪದಾಧಿಕಾರಿ ಪ್ರಮುಖರು ಇದ್ದರು.