ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕರ ಪ್ರತಿಭಟನೆ

CTD 20 KARAMIKARA PRATIBATANE--03
Published on

ಚಿತ್ರದುರ್ಗ: ಶೈಕ್ಷಣಿಕ ಸಹಾಯಧನ ಬಿಡುಗಡೆ ಸೇರಿ ನಾನಾ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ,ಸಿಐಟಿಯು,ರಾಜ್ಯಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಷನ್ ಜಿಲ್ಲಾ ಸಮಿತಿ ನೇತೃತ್ವದಲ್ಲಿ ನಗರದ ಒನಕೆ ಓಬವ್ವ ವೃತ್ತದಲ್ಲಿ ಮಂಗಳವಾರ ಕಾರ್ಮಿಕರು ಪ್ರತಿಭಟನೆ ನಡೆಸಿ, ಶಾಸಕ ಕೆ.ಸಿ.ವೀರೇಂದ್ರ ಅವರಿಗೆ ಮನವಿ ಸಲ್ಲಿಸಿದರು.


ತಾಂತ್ರಿಕ ವಿಷಯಗಳಿಗೆ ಸಂಬಂಧಿಸಿದ ತೊಂದರೆಗಳ ನಿವಾರಣೆ,ಮಂಡಳಿ ಮತ್ತು ಕಾರ್ಮಿಕ ಇಲಾಖೆಯಲ್ಲಿ ಖಾಲಿಯಿರುವ ಹುದ್ದೆ ಭರ್ತಿ ಸೇರಿ ಹಲವು ಬೇಡಿಕೆಗಳ ಈಡೇರಿಸುವಂತೆ ಆಗ್ರಹಿಸಿದರು. ಮನವಿ ಸ್ವೀಕರಿಸಿದ ಶಾಸಕರು ಶಾಸನ ಸಭೆಯಲ್ಲಿ ಪ್ರಸ್ತಾಪಿಸಿ ಸಮಸ್ಯೆ ಗಳನ್ನು ನಿವಾರಿಸುವುದಾಗಿ ಹೇಳಿದರು,
ಸಿ.ಕೆ.ಗೌಸ್‌ಪೀರ್,ಬಿ.ಸಿ.ನಾಗರಾಜಚಾರಿ,ಉಮೇಶ್,ಸಣ್ಣಮ್ಮ,ಶೇಖ್‌ಕಲೀಂವುಲ್ಲಾ,ಧರ್ಮಣ್ಣ,ಭಾಸ್ಕರಚಾರಿ,ಅಬ್ದುಲ್ಲ,ಮಂಜುನಾಥ್,ರಾಘವೇಂದ್ರ,ಇಸ್ಮಾಯಿಲ್,ದೇವರಾಜ್,ಮಹಮದ್ ಸಮೀವುಲ್ಲಾ,ರಂಗಸ್ವಾಮಿ,ಮಲ್ಲಿಕಾರ್ಜುನ್,ಗಿರಿಜಮ್ಮ ಮತ್ತಿತರ ಪ್ರಮುಖರು ಪ್ರತಿಭಟನೆಯಲ್ಲಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net