ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಸ್ವಚ್ಛತಾ ವಾಹಿನಿ ನೌಕರರ ಪ್ರತಿಭಟನೆ

CTD Citu Protest--------------3
filter: 0; fileterIntensity: 0.0; filterMask: 0; brp_mask:0; brp_del_th:null; brp_del_sen:null; delta:null; module: photo;hw-remosaic: false;touch: (0.54023826, 0.35771415);sceneMode: 8;cct_value: 0;AI_Scene: (-1, -1);aec_lux: 0.0;aec_lux_index: 0;albedo: ;confidence: ;motionLevel: -1;weatherinfo: null;temperature: 40;
Published on

ಚಿತ್ರದುರ್ಗ: ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ರಾಜ್ಯಗ್ರಾಪಂ ನೌಕರರ ಸಂಘ,ಸಿಐಟಿಯು ಜಿಲ್ಲಾ ಸಮಿತಿ ನೇತೃತ್ವದಲ್ಲಿ ಗ್ರಾಪಂ ಸ್ವಚ್ಛತಾ ವಾ ಹಿನಿ ನೌಕರರು ನಗರದಲ್ಲಿ ಸೋಮವಾರ ಜಿಪಂ ಬಳಿ ಪ್ರತಿಭಟಿಸಿ ಸಿಇಒ ಅವರಿಗೆ ಮನವಿ ಸಲ್ಲಿಸಿದರು.ಒಪ್ಪಂದ ಮುಗಿದಿದೆ ಕೆಲಸವಿಲ್ಲ, ವೇತನವಿಲ್ಲವೆಂದು ಗ್ರಾಪಂಗಳ ಪಿಡಿಒಗಳಿಗೆ ಜಿಪಂ ಹೇಳಿರುವುದರಿಂದ,ನಾನಾ ಗ್ರಾಪಂಗಳಲ್ಲಿ ಕೆಲಸಕ್ಕೆ ಆಟೋ ಕೊಡದೆ ಚಾಲಕರು,ನೌ ಕರರನ್ನು ಕೆಲಸದಿಂದ ಬಿಡಿಸುವ ಹುನ್ನಾರು ನಡೆಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಂಬಳ ಬೇಕಾದರೆ ಎರಡು ವರ್ಷಗಳ ಜಿಪಿಎಸ್ ಪೋಟೊ ತೋರಿಸುವಂತೆ ಸಿಇಒ ಹೇಳುತ್ತಿದ್ದಾರೆ. ಒಂದು ಅಥವಾ 2 ತಿಂಗಳ ಪೋ ಟೊಗಳನ್ನಾದರೆ ತೋರಿಸಬಹುದೇ ಹೊರತು, ಎರಡು ವರ್ಷಗಳ ಪೋಟೊಗಳನ್ನು ಎಲ್ಲಿಂದ ತರುವುದೆಂದು ಪ್ರಶ್ನಿಸಿದರು. ವೇತನ,ಕೆಲ ಸಕ್ಕೆ ಒತ್ತಾಯಿಸಿದರೆ ತಾಪಂ,ಜಿಪಂಗೆ ಬರೆಯಲಾಗಿದೆ ಎಂದು ಅಧಿಕಾರಿಗಳು ಸುಳ್ಳು ಹೇಳುತ್ತಿದ್ದಾರೆ ಎಂದು ದೂರಿದರು.

ಆಟೋಗಳ ದುರಸ್ತಿಗೆ ಹಣ ಕೊಡದಿರುವುದು ಸೇರಿದಂತೆ ಜಿಲ್ಲೆಯಲ್ಲಿ ಈ ನೌಕರರ ಸಮಸ್ಯೆಗಳು ಬೃಹತ್ ಪ್ರಮಾಣದಲ್ಲಿವೆ. ಕೆಲಸ ವಿಲ್ಲ,ವೇತನವಿಲ್ಲವೆಂಬ ಮೌಖಿಕ ಆದೇಶ ಹಿಂಪಡೆಯಬೇಕು. ಕಿರುಕುಳ ನಿಲ್ಲಬೇಕು.ಚಾಲಕರಾಗಿ ತರಬೇತಿ ಪಡೆದ ಎಲ್ಲರಿಗೂ ಆಟೋ ಕೊಡಬೇಕು. ಗ್ರಾಪಂ ವಾಹನಕ್ಕೆ ತಗಲುವ ವೆಚ್ಚ ಭರಿಸಬೇಕು. ಕನಿಷ್ಠ ವೇತನದಂತೆ ಚಾಲಕರಿಗೆ ಮಾಸಿಕ 16.125 ರೂ., ಸಹಾಯಕರಿಗೆ 15,097 ರೂ. ,ಕಸವಿಲೇವಾರಿ ಮಾಡುವವರಿಗೆ 10000 ಸಾವಿರ ರೂ.ವೇತನ ನೀಡಬೇಕು.

ಹುದ್ದೆ ಸೃಜಿಸಿ ಕೆಲಸದಲ್ಲಿರುವವರನ್ನು ಮುಂದುವರಿಸಬೇಕು,ಅವರನ್ನು ಸರ್ಕಾರಿ ನೌಕರರೆಂದು ಪರಿಗಣಿಸಬೇಕು.ಪ್ರತಿ ವರ್ಷ ಒಪ್ಪಂ ದ ನವೀಕರಣ ಕೈಬಿಡಬೇಕು ಇತ್ಯಾದಿ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿದರು. ಸಿಐಟಿಯು ಜಿಲ್ಲಾ ಸಂಚಾಲಕರಾದ ಡಿ.ಎಂ.ಮಲಿಯಪ್ಪ, ಎನ್.ನಿಂಗಮ್ಮ, ವೈ.ಜಯಲಕ್ಷ್ಮೀ,ಸು ನೀತಾ,ತನುಜಾ,ಆಶಾರಾಣಿ, ಪಿ.ಕವಿತಾ, ಆಶಾ, ಅಕ್ಷತಾ,ಹನು ಮಕ್ಕ ಮತ್ತಿತರರು ಪ್ರತಿಭಟನೆಯ ಲ್ಲಿ ಇದ್ದರು.

(ಸಿಟಿಡಿ 26 ಸಿಐಟಿಯು ಪ್ರೊಟೆಸ್ಟ್)

ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಚಿತ್ರದುರ್ಗದಲ್ಲಿ ಸೋಮವಾರ ಸ್ವಚ್ಛತಾ ವಾಹಿನಿ ನೌಕರರು ಪ್ರತಿಭಟಿಸಿದರು.ಡಿ.ಎಂ.ಮ ಲಿಯಪ್ಪ,ಎನ್.ನಿಂಗಮ್ಮ,ವೈ.ಜಯಲಕ್ಷ್ಮೀ,ಸುನೀತಾ,ತನುಜಾ,ಆಶಾರಾಣಿ, ಪಿ.ಕವಿತಾ,ಆಶಾ, ಅಕ್ಷತಾ,ಹನುಮಕ್ಕ ಇತರರು ಇದ್ದರು.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net