

ಕೆಜಿಎಫ್-: ಸುಮಾರು 20&-30 ವರ್ಷಗಳಿಂದ ಬೆಮೆಲ್ ಕಾರ್ಖಾನೆಯಲ್ಲಿ ಗುತ್ತಿಗೆ ಆಧಾರದಲ್ಲಿ ಸೇವೆ ಸಲ್ಲಿಸುತ್ತಿರುವ ನೌಕರರ ಸೇವೆ ಕಾಯಂಗೊಳಿಸುವುದು ಮತ್ತು ವೇತನ ಹೆಚ್ಚಳ ಸೇರಿ ಇನ್ನಿತರ ಸೌಲಭ್ಯಗಳನ್ನು ಒದಗಿಸಬೇಕು ಎಂದು ಆಗ್ರಹಿಸಿ ನೌಕರರು ಕೈಗೊಂಡಿರುವ ಅರ್ನಿದಿಷ್ಟಾವಧಿ ಮುಷ್ಕರ ನ್ಯಾಯಸಮ್ಮತವಾಗಿದ್ದು, ಆಡಳಿತ ಮಂಡಳಿ ನೌಕರರ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಆರ್.ಕೆ.ಫೌಂಡೇಶನ್ ಅಧ್ಯಕ್ಷ ವಿ.ಮೋಹನ್ಕೃಷ್ಣ ಹೇಳಿದರು.
ನಗರ ಹೊರವಲಯದ ಫೈವ್ಲೈಟ್ಸ್ ವೃತ್ತದ ಬಳಿ ಬಿಇಎಂಎಲ್ ಕಾಯಂಯೇತರ ಗುತ್ತಿಗೆ ಕಾರ್ಮಿಕರ ಸಮನ್ವಯ ಸಮಿತಿಯಿಂದ ನೂರಾರು ಗುತ್ತಿಗೆ ಕಾರ್ಮಿಕರು ಕಳೆದ ಮೂರ್ನಾಲ್ಕು ದಿನಗಳಿಂದ ಕೈಗೊಂಡಿರುವ ಅರ್ನಿದಿಷ್ಟಾವಧಿ ಮುಷ್ಕರಕ್ಕೆ ಬೆಂಬಲ ವ್ಯಕ್ತಪಡಿಸಿ ಮಾತನಾಡಿದರು. ನೌಕರರು ಕಳೆದ ನಾಲ್ಕೆ$ದು ತಿಂಗಳ ಹಿಂದೆ ಇದೇ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕೈಗೊಂಡಿದ್ದ ಮುಷ್ಕರವನ್ನು ಸಂಸದ ಮಲ್ಲೇಶ್ ಬಾಬು ಮತ್ತು ಕೆಜಿಎಫ್ ಶಾಸಕಿ ಎಂ.ರೂಪಕಲಾ, ಬಂಗಾರಪೇಟೆ ಶಾಸಕ ಎಸ್.ಎನ್.ನಾರಾಯಣಸ್ವಾಮಿ ಅವರುಗಳು ಮಧ್ಯಪ್ರವೇಶಿಸಿ ಮೂರು ತಿಂಗಳಲ್ಲಿ ಬೇಡಿಕೆಗಳನ್ನು ಈಡೇರಿಸುವುದಾಗಿ ಭರವಸೆ ನೀಡಿದ್ದರು.
ಆದರೆ ನಾಲ್ಕೆ$ದು ತಿಂಗಳುಗಳಾದರೂ ಇದುವರೆಗೆ ಜನಪ್ರತಿನಿಧಿಗಳು ನೌಕರರ ಯಾವುದೇ ಸಮಸ್ಯೆ ಈಡೇರಿಸಲು ಗಮನ ಹರಿಸದೇ ಇರುವುದು ವಿಷಾದಕರ ಎಂದು ಬೇಸರ ವ್ಯಕ್ತಪಡಿಸಿದರು. ಕಾರ್ಖಾನೆಯಲ್ಲಿ 20 ವರ್ಷದಿಂದ ಇಂದಲ್ಲ ನಾಳೆ ಕಾಯಂ ಆಗುತ್ತದೆ ಎಂದು ಆಸೆಗಣ್ಣಿನಿಂದ ಎದುರು ನೋಡುತ್ತಾ ಕೆಲಸ ಮಾಡಿಕೊಂಡು ಬರುತ್ತಿದ್ದರೂ ಆಡಳಿತ ಮಂಡಳಿ ಸ್ಥಳಿಯರಿಗೆ ಮನ್ನಣೆ ನೀಡದೇ ಹೊರಗಿನಿಂದ ಬರುತ್ತಿರುವ ಅನ್ಯ ರಾಜ್ಯದವರಿಗೆ ಕಾಯಂಗೊಳಿಸುತ್ತಿರುವುದು ಖಂಡನೀಯ ಎಂದು ಆಕ್ರೋಶ ವ್ಯಕ್ತಪಡಿಸಿದ ಅವರು, ಮುಷ್ಕರ ನಡೆಸಲು ಮುಂದಾದ 6 ನೌಕರರ ವಿರುದ್ಧ ಬೆಮೆಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿರುವುದು ಸರಿಯೇ ಎಂದು ಪ್ರಶ್ನಿಸಿದರು.
ಗುತ್ತಿಗೆ ಕಾರ್ಮಿಕರ ಬೇಡಿಕೆಗಳು ನ್ಯಾಯಯುತವಾಗಿದ್ದು, ಅವು ಈಡೇರುವವರೆಗೆ ಅರ್ನಿದಿಷ್ಟಾವಧಿವರೆಗೆ ಮುಷ್ಕರ ಮುಂದುವರೆಸಲು ಸಂಪೂರ್ಣಬೆಂಬಲ ನೀಡಲಾಗುವುದು. ಕೆಜಿಎಫ್ ಜನತೆ ಮತ್ತು ಸಂಘ&ಸಂಸ್ಥೆಗಳವರು ಜಾತ್ಯಾತಿತವಾಗಿ, ಪಕ್ಷಾತಿತವಾಗಿ ನೌಕರರ ಹೋರಾಟಕ್ಕೆ ಬೆಂಬಲ ನೀಡಬೇಕೆಂದು ಮನವಿ ಮಾಡಿದರು.