ಬೇಡಿಕೆ ಈಡೇರದಿದ್ದರೆ ಮುಷ್ಕರ ಮುಂದುವರಿಕೆ

15blrp2
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೆಪಿಟಿಸಿಎಲ್ ನೌಕರರ ಸಂಘ ಬೇಲೂರು ಸೆಸ್ಕ್ ಕಚೇರಿ ಮುಂದೆ ಮುಷ್ಕರ ನಡೆಸಿತು.
Published on

ಬೇಲೂರು: ಸರ್ಕಾರಿ ನೌಕರರಿಗೆ 7ನೇ ವೇತನ ನೀಡಿದಂತೆ ಸೆಸ್ಕ್ ನೌಕರರಿಗೂ ನೀಡಬೇಕೆಂದು ಆಗ್ರಹಿಸಿ ಬುಧವಾರ ಸೆಸ್ಕ್ ಕಚೇರಿ ಮುಂದೆ ಕೆಪಿಟಿಸಿಎಲ್ ನೌಕರರ ಸಂಘ ಮುಷ್ಕರ ನಡೆಸಿತು.

ಸಂಘದ ಕಾರ್ಯದರ್ಶಿ ಜಗದೀಶ್ ಮಾತನಾಡಿ, ಈ ಸಂಬಂಧ ಕೇಂದ್ರ ಸಂಘದಿಂದ ಸರ್ಕಾರಕ್ಕೆ 14 ದಿನಗಳ ಗಡುವು ನೀಡಲಾಗಿತ್ತು. 14 ದಿನ ಕಳೆದರೂ ಸರ್ಕಾರ ಬೇಡಿಕೆ ಈಡೇರಿಸದ ಕಾರಣ ರಾಜ್ಯಾದ್ಯಂತ ಒಂದು ದಿನದ ಮುಷ್ಕರ ನಡೆಸಲಾಗುತ್ತಿದೆ. ಒಂದು ವೇಳೆ ಬೇಡಿಕೆ ಈಡೇರಿದರೆ ಮುಷ್ಕರ ಕೈ ಬಿಟ್ಟು ಕರ್ತವ್ಯ ನಿರ್ವಹಿಸಲಿದ್ದೇವೆ. ಇಲ್ಲದಿದ್ದಲ್ಲಿ ಮಾ.16ರಿಂದ ಕರ್ತವ್ಯಕ್ಕೆ ಹಾಜರಾಗಿ ಮುಷ್ಕರ ನಡೆಸಲಿದ್ದೇವೆ ಎಂದರು.

ಸಂಘದ ಕೇಂದ್ರ ಸಮಿತಿ ನಿರ್ದೇಶಕ ನವಾಜ್ ಖಾನ್, ತಾಲೂಕು ಸಂಘದ ಅಧ್ಯಕ್ಷ ಚಂದ್ರಶೇಖರ್, ಖಜಾಂಚಿ ಯಧುಕುಮಾರ್, ಪದಾಧಿಕಾರಿಗಳಾದ ರಮೇಶ್, ಮಂಜುನಾಥ್, ರಾಘವೇಂದ್ರ, ಉಮೇಶ್, ವಸಂತಲಕ್ಷ್ಮೀ, ಸುಮಯ್ಯ ಕೌಸರ್, ಇಂಜಿನಿಯರ್‌ಗಳಾದ ಎನ್.ಡಿ.ಕುಮಾರ್, ಚಂದ್ರಶೇಖರ್, ಡಿಎಲ್‌ಎಸ್‌ಎಸ್ ಇಂಜಿನಿಯರ್ ನಾಗರಾಜು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net