ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಶ್ರಮ

30ard02
ಔರಾದ್ ತಾಲೂಕಿನ ಜೋಜನಾ ಗ್ರಾಮದ ಹನುಮಾನ ಮಂದಿರ ಆವರಣದಲ್ಲಿ ಗ್ರಾಮ ಸಂಚಾರದ ಕೊನೆ ದಿನ ಗುರುವಾರ ಶಾಸಕ ಪ್ರಭು ಚವ್ಹಾಣ್ ಸಾರ್ವಜನಿಕರಿಗೆ ಸಮಸ್ಯೆ ಆಲಿಸಿ ಮಾತನಾಡಿದರು. ಅಧಿಕಾರಿಗಳಾದ ಮಲಶೆಟ್ಟಿ ಚಿದ್ರೆ, ಮಾಣಿಕರಾವ ಪಾಟೀಲ, ಸುಭಾಷ, ಧೂಳಪ್ಪ, ವೆಂಕಟರಾವ ಶಿಂಧೆ, ಪ್ರಮುಖರಾದ ವಸಂತ ಬಿರಾದಾರ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ, ಶಿವರಾಜ ಅಲ್ಮಾಜೆ, ಖಂಡೋಬಾ ಕಂಗಟೆ ಇತರರಿದ್ದರು.
Published on

ಔರಾದ್: ಗ್ರಾಮ ಸಂಚಾರದ ಸಂದರ್ಭದಲ್ಲಿ ಬಂದಿರುವ ಬೇಡಿಕೆಗಳನ್ನು ಆದ್ಯತೆಯಾಗಿಸಿಕೊಂಡು ಅಭಿವೃದ್ಧಿ ಕೆಲಸಗಳನ್ನು ಕೈಗೆತ್ತಿಕೊಂಡು ಅನುದಾನದ ಲಭ್ಯತೆಗೆ ಅನುಗುಣವಾಗಿ ಹಂತ ಹಂತವಾಗಿ ಬೇಡಿಕೆ ಈಡೇರಿಕೆಗೆ ಪ್ರಾಮಾಣಿಕ ಶ್ರಮಿಸುವೆ ಎಂದು ಶಾಸಕ ಪ್ರಭು ಚವ್ಹಾಣ್ ಭರವಸೆ ನೀಡಿದರು.

ಗ್ರಾಮ ಸಂಚಾರದ ಕೊನೆಯ ದಿನ ಗುರುವಾರ ಕ್ಷೇತ್ರದ ಹಾಲಹಳ್ಳಿ, ಮಸ್ಕಲï, ನಾಗೂರ(ಬಿ), ಸಂತಪೂರ, ಕಪ್ಪಿಕೇರಿ, ಜೊನ್ನೆಕೇರಿ ಹಾಗೂ ಜೋಜನಾ ಗ್ರಾಮಗಳಿಗೆ ತೆರಳಿ ಸರ್ಕಾರಿ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳ ಉನ್ನತೀಕರಣ, ದುರಸ್ತಿ, ಸೋಲಾರ್ ಪೆನಲ್ ಅಳವಡಿಸುವ ಕಾಮಗಾರಿ, ಶುದ್ಧ ಕುಡಿಯುವ ನೀರಿನ ಘಟಕ, ಶೌಚಗೃಹ, ಸಮುದಾಯ ಭವನ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು.

ಪ್ರತಿ ಗ್ರಾಮದಲ್ಲಿ ಸಾರ್ವಜನಿಕರ ಸಭೆ ನಡೆಸಿ ಗ್ರಾಮಸ್ಥರ ಸಮಸ್ಯೆಗಳ ಅಹವಾಲುಗಳನ್ನು ಆಲಿಸಿದರು. ಈ ವೇಳೆ ಗ್ರಾಮಸ್ಥರು ಸಿಸಿ ರಸ್ತೆ, ಚರಂಡಿ, ಸಮುದಾಯ ಭವನ, ಕೃಷಿ ಜಮೀನುಗಳ ರಸ್ತೆ, ಹೈಮಾಸ್ಟ್​ ವಿದ್ಯುತ್ ದೀಪ, ವಿದ್ಯುತ್ ಸಮಸ್ಯೆಯಂತಹ ನಾನಾ ರೀತಿಯ ಸಮಸ್ಯೆಗಳನ್ನು ಹಂಚಿಕೊಂಡರು.

ಗ್ರಾಮಸ್ಥರ ಮನವಿಗಳನ್ನು ಶಾಂತತೆಯಿಂದ ಆಲಿಸಿದ ಶಾಸಕರು, ಜನರ ಸಮಸ್ಯೆಗಳನ್ನು ಅವರ ಬಳಿಗೆ ಹೋಗಿ ತಿಳಿದು ಸ್ಥಳದಲ್ಲೇ ಪರಿಹಾರ ಕಲ್ಪಿಸಬೇಕೆಂಬ ಸದಾಶಯದೊಂದಿಗೆ ಅಧಿಕಾರಿಗಳ ತಂಡ ಜತೆಗೆ ಗ್ರಾಮ ಸಂಚಾರ ನಡೆಸುತ್ತಿದ್ದೇನೆ. ಸಾಧ್ಯವಾಗುವ ಕೆಲಸಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸುವ ಕೆಲಸವಾಗುತ್ತಿದೆ ಎಂದರು.

ಕೊನೆಯ ಗ್ರಾಮವಾದ ಜೋಜನಾದಲ್ಲಿ ಶಾಸಕರು ವಿವಿಧ ಇಲಾಖೆಯ ತಾಲೂಕು ಮಟ್ಟದ ಅಧಿಕಾರಿಗಳ ಜತೆ, ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವ ಕೆಲಸ ಮಾಡಿದರು. ಸಹಾಯಕ ಕೃಷಿ ನಿರ್ದೇಶಕ ಧೂಳಪ್ಪ, ಜೆಸ್ಕಾ ಇಲಾಖೆ ಎಡಿ ರವಿ ಕಾರಬಾರಿ ತಮ್ಮ ಇಲಾಖೆಯಲ್ಲಿನ ಸೌಲಭ್ಯಗಳ ಬಗ್ಗೆ ಮಾಹಿತಿ ನೀಡಿದರು. ಜೋಜನಾ ಗ್ರಾಮದ ಹಿರಿಯ ಜೀವಿ ಶರಣಪ್ಪ ಕನ್ನಾಳಿ ಅವರು ಶಾಸಕರು ಗ್ರಾಮಕ್ಕೆ ಮಾಡಿದ ಕೆಲಸಗಳ ಪ್ರಗತಿ ಬಗ್ಗೆ ವಿವರಿಸಿದರು.

ತಹಸೀಲ್ದಾರ್‌ರಾದ ಮಲಶೆಟ್ಟಿ ಚಿದ್ರೆ, ಅಮಿತಕುಮಾರ ಕುಲಕರ್ಣಿ, ತಾಪಂ ಇಒ ಮಾಣಿಕರಾವ ಪಾಟೀಲ, ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಎಇಇ ಸುಭಾಷ, ಜೆಸ್ಕಾಂ ಎಇಇ ರವಿ ಕಾರಬಾರಿ, ಆರೋಗ್ಯಾಧಿಕಾರಿ ಡಾ.ಗಾಯತ್ರಿ, ಕೃಷಿ ಇಲಾಖೆಯ ಧೂಳಪ್ಪ, ಪಂಚಾಯತ್ ರಾಜ್ ಇಂಜಿನಿಯರಿಂಗ್ ಇಲಾಖೆಯ ವೆಂಕಟರಾವ ಶಿಂಧೆ, ಮುಖಂಡರಾದ ವಸಂತ ಬಿರಾದಾರ, ಧೊಂಡಿಬಾ ನರೋಟೆ, ರಾಮಶೆಟ್ಟಿ ಪನ್ನಾಳೆ, ಅರಹಂತ ಸಾವಳೆ, ಶಿವರಾಜ ಅಲ್ಮಾಜೆ, ಸಾಗರ ಪಾಟೀಲ, ಖಂಡೋಬಾ ಕಂಗಟೆ, ಅಶೋಕ ಅಲ್ಮಾಜೆ, ಮಂಜು ಸ್ವಾಮಿ, ರಾವಸಾಬï ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net