

ಗುರುಮಠಕಲ್: ಗ್ರಾಪಂ ನೌಕರರಿಗೆ ಸುಪ್ರಿಂ ಕೋರ್ಟ್ ಆದೇಶದಂತೆ ಕನಿಷ್ಠ ವೇತನ ಜಾರಿಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಆಗ್ರಹಿಸಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ (ಸಿಐಟಿಯು) ತಾಲೂಕು ಘಟಕದ ಕಾರ್ಯಕರ್ತರು ಒತ್ತಾಯಿಸಿದರು.
ಈ ವೇಳೆ ಸಂಘದ ತಾಲೂಕು ಘಟಕದ ಅಧ್ಯಕ್ಷ ಮಹಾದೇವಪ್ಪ ಯಂಪಾಡ ನೇತೃತ್ವದಲ್ಲಿ ತಾಪಂ ಸಹಾಯಕ ಯೋಜನಾಧಿಕಾರಿಗೆ ಮನವಿ ಸಲ್ಲಿಸಿದ ಅವರು, ಕನಿಷ್ಠ ಆರು ಸಾವಿರ ಪಿಂಚಣಿ ನೀಡಬೇಕು, ನಮಗೆ ಸರ್ಕಾರಿ ನೌಕರರೆಂದು ಪರಿಗಣಿಸಬೇಕು. ಹೊರಗುತ್ತಿಗೆ, ಖಾಸಗಿ ನೌಕರರ ನೇಮಕ ಕೂಡಲೇ ಕೈ ಬಿಡಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಸಬೇಕೆಂದು ಮನವಿಯಲ್ಲಿ ಆಗ್ರಹಿಸಿದರು.
ಉಪಾಧ್ಯಕ್ಷ ಭೀಮರಾಯ ಚಪೆಟ್ಲಾ ಮತ್ತು ಅಯ್ಯಣ್ಣ, ಪ್ರಧಾನ ಕಾರ್ಯದರ್ಶಿ ಮಂಜುನಾಥ ಚಿನ್ನಾಕಾರ, ಖಜಾಂಚಿ ಶಂಕರ ಕಾಕಲವಾರ, ಗೌರವಾಧ್ಯಕ್ಷ ಸಾಬಣ್ಣ ಮಾಧ್ವಾರ, ಸಹಕಾರ್ಯದರ್ಶಿ ಅಂಜಪ್ಪ ಇತರರಿದ್ದರು.