ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮನವಿ

web3
ಬೈಲಹೊಂಗಲ ಪಟ್ಟಣದ ಹರಳಯ್ಯ ಕಾಲನಿ ನಿವಾಸಿಗಳು ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು. ಪರಶುರಾಮ ರಾಯಬಾಗ, ಮಾರುತಿ ಕೊಂಡೂರ ಇತರರಿದ್ದರು.
Published on

ಬೈಲಹೊಂಗಲ: ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ಅಂಬೇಡ್ಕರ್ ಯುವ ಸೇನೆ ಕಾರ್ಯಕರ್ತರು ಬುಧವಾರ ಉಪವಿಭಾಗಾಧಿಕಾರಿ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

ಅಂಬೇಡ್ಕರ್ ಯುವ ಸೇನೆ ರಾಜ್ಯ ಉಪಾಧ್ಯಕ್ಷ ಪರಶುರಾಮ ರಾಯಬಾಗ ಮಾತನಾಡಿ, ಪಟ್ಟಣದ ಹರಳಯ್ಯ ಕಾಲೋನಿ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ, ಉದ್ಯಾನವನ ಅಭಿವೃದ್ಧಿ, ಒಳಚರಂಡಿ ಕಾಮಗಾರಿ, 24/7 ಕುಡಿಯುವ ನೀರಿನ ಕಾಮಗಾರಿ, ರಸ್ತೆ ಸೇರಿದಂತೆ ಅನೇಕ ಬೇಡಿಕೆಗಳನ್ನು ಈಡೇರಿಸಬೇಕು ಎಂದು ಒತ್ತಾಯಿಸಿದರು.

ಮಾರುತಿ ಕೊಂಡೂರ, ರಾಮು ಕಳಂಕರ, ಸುನೀಲ ಹಲಗಿ, ಗಂಗಪ್ಪ ರಾಯಬಾಗ, ರಫೀಕ್ ಅನ್ಸಾರಿ, ಗೊರೆಸಾಬ್ ಮುಜಾವರ, ವಿನೋದ ಸವದತ್ತಿ, ಅರ್ಜುನ ರಾಯಬಾಗ, ಉಮೇಶ ದೊಡಮನಿ, ಸುರೇಶ ಅಗಾಸಿ, ಈರಣ್ಣ ರಾಯಬಾಗ, ರಿಯಾಜ ಅನ್ಸಾರಿ, ಮಂಜುನಾಥ ರಾಯಬಾಗ, ಅರ್ಜುನ ಕೆಳಗೇರಿ, ನಾರಾಯಣ. ಕಳಂಕರ, ಮಂಜು ಚಿಕ್ಕಣ್ಣವರ, ಕುಮಾರ ಅಗಾಸಿ, ಬಸವರಾಜ ಕಿತ್ತೂರು, ರಾಜೇಶ ತೋರಗಲ, ಮಲ್ಲವ್ವ ಭಜಂತ್ರಿ, ಪುಷ್ಕರ ಪಟೇಲ, ಮಲ್ಲವ್ವ ಭಜಂತ್ರಿ, ಮಾಬುಬಿ ಸಯ್ಯದ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net