ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸತ್ಯಾಗ್ರಹ

30 vikram 2
Published on

ವಿಜಯವಾಣಿ ಸುದ್ದಿಜಾಲ ಧಾರವಾಡ
ಜಲ ಮಂಡಳಿ ನೌಕರರ ವೇತನ ಬಿಡುಗಡೆ, ಮರು ನೇಮಕ ಮಾಡಿಕೊಳ್ಳುವಂತೆ ಆಗ್ರಹಿಸಿ ನಗರದ ಮಹಾನಗರ ಪಾಲಿಕೆ ಕಚೇರಿ ಎದುರು ಜನಜಾಗೃತಿ ಸಂಘದ ನೇತೃತ್ವದಲ್ಲಿ ಸೋಮವಾರದಿಂದ ಆಮರಣ ಉಪವಾಸ ಸತ್ಯಾಗ್ರಹ ಆರಂಭಿಸಲಾಗಿದೆ.
ನೌಕರರ ಬೇಡಿಕೆ ಈಡೇರಿಸಿ ನೆಮ್ಮದಿ ಜೀವನಕ್ಕೆ ಅನುಕೂಲ ಕಲ್ಪಿಸುವಂತೆ ಹಲವು ಬಾರಿ ಹೋರಾಟ ನಡೆಸಿದರೂ ಪ್ರಯೋಜನವಾಗಿಲ್ಲ. ಈ ಹೋರಾಟ ಕೊನೇ ಅಸ್ತ್ರವಾಗಿದೆ. ನೌಕರರ ಬೇಡಿಕೆ ಈಡೇರದ ಕಾರಣ ನಗರದಲ್ಲಿ ನೀರಿನ ಸಮಸ್ಯೆ ಎದುರಾಗಿದೆ. ಆದಾಗ್ಯೂ ಸಕಾರಾತ್ಮಕವಾಗಿ ಸ್ಪಂದಿಸದ ಪಾಲಿಕೆ, ಜಿಲ್ಲೆಯ ಜನಪ್ರತಿನಿಧಿಗಳು, ರಾಜ್ಯ ಸರ್ಕಾರ ತಮ್ಮ ವೈಯಕ್ತಿಕ ಪ್ರತಿಷ್ಠೆಗಾಗಿ ಎಲ್ ಆ್ಯಂಡ್ ಟಿ ಕಂಪನಿ ಹಿತ ಕಾಯುತ್ತಿದ್ದಾರೆ ಹೊರತು, ನೌಕರರ ಕಾಳಜಿ ವಹಿಸುತ್ತಿಲ್ಲ ಎಂದು ಆರೋಪಿಸಿದರು.
ಇನ್ನಾದರೂ ರಾಜ್ಯ ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ನೌಕರರ 8 ತಿಂಗಳ ವೇತನ ಬಿಡುಗಡೆ ಜತೆಗೆ ಎಲ್ಲ ನೌಕರರನ್ನು ಮರು ನೇಮಕ ಮಾಡಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ದಿನಗಳಲ್ಲಿ ಸಂಭವಿಸುವ ಅನುಹುತಗಳಿಗೆ ರಾಜ್ಯ ಸರ್ಕಾರವೇ ಹೊಣೆ ಎಂದು ಎಚ್ಚರಿಸಿದರು.
ಜನಜಾಗೃತಿ ಸಂಘದ ಅಧ್ಯಕ್ಷ ಬಸವರಾಜ ಕೊರವರ, ಉಪಾಧ್ಯಕ್ಷ ನಾಗರಾಜ ಕಿರಣಗಿ, ನೌಕರರ ಸಂಘದ ಅಧ್ಯಕ್ಷ ಮಹಾಂತೇಶ ಗೌಡರ, ನೌಕರರಾದ ಅಮಿತ ತಾರಿಹಾಳ, ಮಂಜುನಾಥ ಚವ್ಹಾಣ, ಶರಣು ಕಂಬಾರ, ಶೇಖು ಬೆಟಗೇರಿ, ಪ್ರಕಾಶ ಹುಲ್ಲೂರ, ಬಸನಗೌಡ ಜಕ್ಕನಗೌಡರ, ಅಣ್ಣಪ್ಪ ಕಾಳಗಿ, ಸಂತೋಷ ಕರಿಲಿಂಗಣ್ಣನವರ, ನಿಂಗಪ್ಪ ಕಡೆಮನಿ, ಮಂಜುನಾಥ ಕರಿಲಿಂಗಣ್ಣವರ, ರಾಜು ಭೂಮಕ್ಕನವರ, ರಾಜಪತ್ರ ದೊಡ್ಡಮನಿ, ಬಸಮ್ಮ ರತ್ನಣ್ಣವರ, ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net