ಬೇಡ ಮಾದಕ ವಸ್ತುಗಳ ಸಹವಾಸ

CTD POLICE NEWS-------
Published on

ಚಿತ್ರದುರ್ಗ: ಮಾದಕ ವಸ್ತುಗಳ ಸೇವನೆಯಂಥ ದುಶ್ಚಟಗಳಿಂದ ದೂರವಿರುವಂತೆ ಯುವ ಜನರಿಗೆ ಎಸ್‌ಪಿ ರಂಜಿತ್‌ಕುಮಾರ್ ಬಂಡಾರು ಮನ ವಿ ಮಾಡಿದರು.

ಜಿಲ್ಲಾ ಪೊಲೀಸ್ ಇಲಾಖೆ ಅಪರಾಧ ತಡೆ ಮಾಸಾಚರಣೆ ಅಂಗವಾಗಿ ನಗರದ ಟಿಪ್ಪು ವೃತ್ತದಲ್ಲಿ ಗುರುವಾರ ಆಯೋಜಿ ಸಿದ್ದ ನಶೆ ಮುಕ್ತ ಕರ್ನಾಟಕ ವಿಶೇಷ ಅಭಿಯಾನ ಕಾರ‌್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಮಾದಕ ವಸ್ತು ಸೇವನೆ ಚಟ ದೈಹಿಕ ಮ ತ್ತು ಮಾನಸಿಕವಾಗಿ ಗಾಢ ದುಷ್ಪರಿಣಾಮ ಬೀರುತ್ತದೆ. ಜೀವ,ಬದುಕಿಗೆ ಮಾರಕವಾಗುವ ದುಶ್ಚಟಗಳಿಂದ ದೂರವುಳಿದು ಓದು,ಆ ಟೋಟ ಮತ್ತಿತರರ ಉತ್ತಮ ಹವ್ಯಾಸಗಳೊಂದಿಗೆ ಉತ್ತಮ ಜೀವನವನ್ನು ಕಟ್ಟಿಕೊಳ್ಳ ಬೇಕು.

ಮಾದಕ ವಸ್ತುಗಳ ಬಳಕೆ,ಮಾರಾಟ ಮತ್ತು ಶೇಖರಣೆ ಮಾಹಿತಿ ಇದ್ದರೆ ಡ್ರಗ್ ಫ್ರೀ ಕರ್ನಾಟಕ ಆ್ಯಪ್ ಮೂಲಕ ಜನರು ಮಾಹಿತಿ ನೀ ಡ ಬಹುದು. ಮಾಹಿತಿ ನೀಡಿದವರ ವಿವರ ಗೌಪ್ಯವಾಗಿರುತ್ತದೆ ಎಂದು ಜನರಿಗೆ ಸಲಹೆ ಇಂತಹ ಕೃತ್ಯಗಳಲ್ಲಿ ಭಾಗಿಯಾದವರ ವಿರುದ್ಧ ಎನ್‌ಡಿಪಿಎಸ್ ಕಾಯ್ದೆಯಡಿ ಕಠಿಣ ಕ್ರಮ ಜರುಗಿಸಲಾಗುತ್ತದೆ ಎಂದರು.

ಜಿಲ್ಲಾಸ್ಪತ್ರೆ ಮನೋವೈದ್ಯ ಡಾ.ಮಂಜುನಾಥ್ ಮಾತನಾಡಿ, ಮಾದಕ ವ್ಯಸನ ಹಾಗೂ ಇನ್ನಿತರೆ ದುಶ್ಚಟಗಳ ಬಳಕೆ ಪ್ರಮಾಣ ಈಚೆಗೆ ಹೆಚ್ಚಾಗುತ್ತಿದೆ. ಅದರಲ್ಲೂ 15-17 ವರ್ಷದೊಳಗಿನ ಮಕ್ಕಳು ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ.ಮಾದಕ ವಸ್ತುಗಳ ಬಳಕೆ ದುಷ್ಕೃತ್ಯಗ ಳಿಗೆ ಪ್ರೇರೆಪಿಸುತ್ತದೆಂದು ಎಚ್ಚರಿಸಿದರು.

ಜಿಲ್ಲಾ ಶಸ್ತ್ರಚಿಕಿತ್ಸಕ ಡಾ.ಎಸ್.ಪಿ.ರವೀಂದ್ರ ಮಾತನಾಡಿ,ದುಶ್ಚಟಗಳಿಂದ ಹೃದಯಾಘಾತ, ಕಿಡ್ನಿ ಸಮಸ್ಯೆ, ಕ್ಯಾನ್ಸರ್‌ನಂತಹ ಮಾರಕ ಕಾ ಯಿಲೆಗಳಿಗೆ ತುತ್ತಾಗಬೇಕಾಗುತ್ತದೆ ಎಂದರು. ಸಿಇಎನ್ ಠಾಣೆ ಇನ್ಸ್‌ಪೆಕ್ಟರ್ ಎನ್.ವೆಂಕಟೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು.

ಡಿವೈಎಸ್‌ಪಿಗಳಾದ ಪಿ.ಕೆ.ದಿನಕರ್,ಎಸ್.ಎಸ್.ಗಣೇಶ್,ಕೋಟೆ ಪಿಐ ದೊಡ್ಡಣ್ಣ,ಜಿಲ್ಲಾ ವಕ್ಫ್‌ಬೋರ್ಡ್ ಅಧ್ಯಕ್ಷ ಎಂಸಿಒ ಬಾಬು,ಚಿ ತ್ರದುರ್ಗ ವೈದ್ಯಕೀಯ ಕಾಲೇಜು ಡೀನ್ ಡಾ.ಯುವರಾಜ್,ನಗರಸಭೆ ಸದಸ್ಯರಾದ ಗೊಪ್ಪೆಮಂಜುನಾಥ,ಸೈಯದ್ ಸೈಫುಲ್ಲಾ,ಬಾಬು ಪಾಟೀಲ್,ಷಬ್ಬೀರ್,ದಾದಾಪೀರ್ ಮತ್ತಿತರರು ಇದ್ದರು.

ಅಭಿಯಾನದ ಅಂಗವಾಗಿ ನಗರದ ಕನಕ ವೃತ್ತದಲ್ಲಿ ಆಯೋಜಿಸಿದ್ದ ಜಾಗೃತಿ ಜಾಥಾಕ್ಕೆ ಎಸ್‌ಪಿ ಚಾಲನೆ ನೀಡಿದರು. ನಾನಾ ರಸ್ತೆಗಳ ಮೂಲಕ ಟಿಪ್ಪು ವೃತ್ತ ತಲುಪಿತು. ಬಸವೇಶ್ವರ ಮೆಡಿಕಲ್ ಕಾಲೇಜು,ಸರ್ಕಾರಿ ನರ್ಸಿಂಗ್ ಕಾಲೇಜ್, ಜ್ಞಾನವಿಕಾಸ ಹಾಗೂ ಬರಗೇರಮ್ಮ ಶಾಲಾ ವಿದ್ಯಾರ್ಥಿಗಳು ಜಾಥಾದಲ್ಲಿ ಪಾಲ್ಗೊಂಡಿದ್ದರು.

22ರಂದು ಮ್ಯಾರಥಾನ್ ಓಟ

ಅಪರಾಧ ತಡೆ ಮಾಸಾಚರಣೆ ಅಂಗವಾಗಿ ಸಾರ್ವಜನಿಕರಲ್ಲಿ ಸೈಬರ್ ಅಪರಾಧ,ಸಂಚಾರ ನಿಯಮ ಮತ್ತು ರಸ್ತೆ ಸುರಕ್ಷತೆ,ಸ್ವತ್ತು ಕಳವು ಅಪರಾಧ,ಮಾದಕ ವಸ್ತುಗಳ ಸೇವನೆ ಮತ್ತು ಮಾರಾಟ ತಡೆಮತ್ತು ಮಹಿಳೆಯರು,ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯ ಗಳ ನಿಯಂತ್ರಣ ನಿಟ್ಟಿನಲ್ಲಿ ಡಿ.22ರಂದು ನಗರದಲ್ಲಿ 5 ಕಿ.ಮೀ.ಜಾಗೃತಿ ಓಟ ಏರ್ಪಡಿಸಲಾಗಿದೆ.

ವೀರ ವನಿತೆ ಒನಕೆ ಓಬವ್ವ ಕ್ರೀಡಾಂಗಣದ ಕ್ರೀಡಾಪಟುಗಳ ಸಂಘ,ಟರ್ಬೋಸ್ಟೀಲ್ ಹಾಗೂ ಪೊಲೀಸ್ ಇಲಾಖೆ ಆಶ್ರಯದಲ್ಲಿ ಅಂ ದು ಬೆಳಗ್ಗೆ 7ಕ್ಕೆ ಡಿಎಆರ್‌ಮೈದಾನದಿಂದ ನಗರದ ಪ್ರಮುಖ ರಸ್ತೆಗಳ ಮೂಲಕ ಪುನಃ ಅಲ್ಲಿಗೆ ಸೇರಲಿದೆ. ವಿಜೇತರಿಗೆ ಕ್ರಮವಾಗಿ 5 ಸಾವಿ ರ ರೂ., 4 ಸಾವಿರ ರೂ.,ಹಾಗೂ 3 ಸಾವಿರ ರೂ.ನಗದು ಬಹುಮಾನ,ಪ್ರಶಂಸನಾ ಪತ್ರ ವಿತರಿಸಲಾಗುವುದೆಂದು ಎಸ್‌ಪಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net