

ಚಿತ್ರದುರ್ಗ:ಈ ಬಾರಿಯ ಎಸ್ಸೆಸ್ಸೆಲ್ಸಿಯಲ್ಲಿ ಶೇ.90ಕ್ಕಿಂತ ಅಧಿಕ ಹಾಗೂ ದ್ವಿತೀಯ ಪಿಯುಸಿಯಲ್ಲಿ ಶೇ.85ಕ್ಕಿಂತ ಹೆಚ್ಚಿನ ಅಂಕಗಳೊಂ ದಿಗೆ ಉತ್ತೀರ್ಣರಾಗಿರುವ ಜಿಲ್ಲಾ ಬೇಡ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಹಾಗೂ ಆರ್ಥಿಕವಾಗಿ ಹಿಂದುಳಿದ ಜಂಗಮ ಸಮಾಜದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ ನೀಡಲಾಗುವುದು. ಆಸಕ್ತರು ಮೇ 30ರೊಳಗೆ ಅಗತ್ಯದಾಖಲೆಗಳೊಂದಿಗೆ, ಜಿಲ್ಲಾ ಬೇಡ ಜಂಗಮ ಸಮಾಜ ಸಂಸ್ಥೆ,ಮೊದಲ ಮಹಡಿ,ಸೆಂಟ್ರಲ್ ಬ್ಯಾಂಕ್‌ಬಿಲ್ಡಿಂಗ್ ಜೆಸಿಆರ್ ಸರ್ಕಲ್ ಚಿತ್ರದುರ್ಗ,ಇಲ್ಲಿಗೆ ಅರ್ಜಿಸಲ್ಲಿಸ ಬ ಹುದೆಂದು ಸಮಾಜದ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಸ್.ಷಡಾಕ್ಷರಯ್ಯ ತಿಳಿಸಿದ್ದಾರೆ. ಈ ಸಮಾರಂಭದಲ್ಲಿ ಪದವಿ,ಸ್ನಾತಕೋತ್ತರ ಪ ದವಿಗಳಲ್ಲಿ ರ‌್ಯಾಂಕ್‌ಗಳಿರುವ ಹಾಗೂ ಡಾಕ್ಟರೇಟ್ ಪಡೆದ ಜಂಗಮ ಸಮಾಜದವರನ್ನು ಸನ್ಮಾನಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂ ರವಾಣಿ ಸಂಖ್ಯೆ 9449681797 ಸಂಪರ್ಕಿಸಬಹುದು.