ಬೇಟಬಾಲಕುಂದಾ ಗ್ರಾಪಂ ಪಿಡಿಒ ವರ್ಗಾವಣೆ ರದ್ದುಪಡಿಸಿ

21BK1 (1)
Published on

ಬಸವಕಲ್ಯಾಣ: ಬೇಟಬಾಲಕುಂದಾ ಗ್ರಾಮ ಪಂಚಾಯಿತಿ ಪಿಡಿಒ ರಮೇಶ ರಾಠೋಡ್ ವರ್ಗಾವಣೆಯನ್ನು ರದ್ದುಪಡಿಸಬೇಕು ಎಂದು ಗ್ರಾಮಸ್ಥರು ಗುರುವಾರ ಬಿಕೆಡಿಬಿ ಕಚೇರಿಯಲ್ಲಿ ಶಾಸಕ ಬಿ.ನಾರಾಯಣರಾವ ಅವರನ್ನು ಭೇಟಿಯಾಗಿ ಮನವಿಪತ್ರ ಸಲ್ಲಿಸಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಎಲ್ಲ ಕಾರ್ಯಗಳು ನಿಯಮದಂತೆ ಪಿಡಿಒ ಮಾಡಿಕೊಂಡು ಬರುತ್ತಿದ್ದಾರೆ. ಜನರ ಸಮಸ್ಯೆ ಪರಿಹರಿಸಲು ಕಾಳಜಿ ವಹಿಸಿದ್ದಾರೆ. ಅಭಿವೃದ್ಧಿ ಕೆಲಸಗಳು ಸರಾಗವಾಗಿ ನಡೆದಿವೆ. ಇಂಥವರನ್ನು ವರ್ಗಾವಣೆ ಮಾಡಿದರೆ ಪ್ರಗತಿಪರ ಕೆಲಸಗಳಿಗೆ ತೊಡಕು ಉಂಟಾಗಲಿದೆ. ಹೀಗಾಗಿ ವರ್ಗಾವಣೆ ಆದೇಶ ರದ್ದುಪಡಿಸುವಂತೆ ಕೋರಿದರು. ಇದಕ್ಕೆ ಸ್ಪಂದಿಸಿದ ಶಾಸಕರು, ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.
ಪ್ರಮುಖರಾದ ಜಾವೇದ್ ಅಲಿ, ಅನೀಲ ಕಾಂಬಳೆ, ಸಚಿನ ಸಿಂಧೆ, ಚಿದಾನಂದ ಮಠಪತಿ, ಶರಣಪ್ಪ ಮೇತ್ರೆ, ನಾಗೇಶ, ಶ್ರೀಶೈಲ, ಶರಣಪ್ಪ ಮೇತ್ರೆ, ಅಶೋಕ ಸ್ವಾಮಿ, ಶಂಭುಲಿಂಗ ಸ್ವಾಮಿ, ಶರಣಪ್ಪ ಬಿ., ನಾಮದೇವ ಸಿಂಧೆ ಇತರರಿದ್ದರು. ಬೇಡಿಕೆ ಕುರಿತು ತಾಪಂ ಇಒ ಅವರಿಗೂ ಮನವಿಪತ್ರ ಸಲ್ಲಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net