ಬೆಸ್ಟ್ ಕಾಲೇಜು ಉತ್ತಮ ಸಾಧನೆ

05 YERRISWAMY 02
Published on

ಬಳ್ಳಾರಿ : ಪ್ರಸ್ತಕ ಸಾಲಿನ ರಾಷ್ಟ್ರಮಟ್ಟದ ವೈದ್ಯಕೀಯ ಮತ್ತು ದಂತ ವೈದ್ಯಕೀಯ (ನೀಟ್) ಪರೀಕ್ಷಾ ಫಲಿತಾಂಶದಲ್ಲಿ ಬಳ್ಳಾರಿ ಸ್ವತಂತ್ರ ಪದವಿ ಪೂರ್ವ (ಬೆಸ್ಟ್ ) ಕಾಲೇಜು ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ಪ್ರದೀಪ್ ಪಾಟೀಲ್ 648, ಅನಿಲ್ ಕುಮಾರ 647, ಸೈಯದ್ ಮಹಮದ್ ಅಶ್ಛಕ 615, ವೈಷ್ಣವಿ 602, ಟಿ.ಜೆ. ಶಶಿಧರ 593, ಕಾಸಾ ನಿಖಿಲ್ 593, ಎಸ್.ಆರ್. ದರ್ಶನ 582, ಗೌರಿಶಂಕರ 570, ಬಸಮ್ಮ 563, ಸಯೇದಾ ಮೆಹಬೂಬ್ 561, ಅನುಷಾ ಪಾಟೀಲ್ 539, ಮಧುಮತಿ 520, ಕುಮಾರ 516, ಬಸವಲೀಲಾ 515, ರುಷಿಕಾ 514, ಸುಷ್ಮಾ 500 ಅಂಕ ಗಳಿಸಿದ್ದಾರೆ. 500 ರಿಂದ 650 ಅಂಕಗಳ ಒಳಗೆ 25 ಮತ್ತು 400 ಅಂಕಗಳಿಗಿಂತಲೂ ಹೆಚ್ಚು 45 ವಿದ್ಯಾರ್ಥಿಗಳು ಪಡೆದು ಕಾಲೇಜಿನ ಕೀರ್ತಿಯನ್ನು ಹೆಚ್ಚಿಸಿದ್ದಾರೆ ಎಂದು ಕಾಲೇಜಿನ ಪ್ರಾಚಾರ್ಯ ಕೆ. ವೆಂಕಟೇಶ್ವರರಾವ್ ತಿಳಿಸಿದ್ದಾರೆ. ವಿದ್ಯಾರ್ಥಿಗಳಾದ ಸಾಧನೆಗೆ ಬೆಸ್ಟ್ ಸಂಸ್ಥೆ ಅಧ್ಯಕ್ಷ ಕೋನಂಕಿ ರಾಮಪ್ಪ, ಉಪಾಧ್ಯಕ್ಷ ಕೋನಂಕಿ ತಿಲಕ್‌ಕುಮಾರ, ಕಾರ್ಯದರ್ಶಿಗಳಾದ ಮನ್ನೆಶ್ರೀನಿವಾಸುಲು, ಶ್ರೀರಾಮರಾಯುಡು, ಉಪಪ್ರಾಚಾರ್ಯ ಜಿ.ಶ್ರೀನಿವಾಸರೆಡ್ಡಿ ಹರ್ಷ ವ್ಯಕ್ತಪಡಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net