ಬೆಸ್ಕಾಂ ಕಾರ್ಯಪಾಲನ ಕಚೇರಿ ಸ್ಥಳಾಂತರ

Untitled--005
Published on

ಚಿತ್ರದುರ್ಗ: ನಗರದ ಐಶ್ವರ್ಯ ಫೋರ್ಟ್ ಬಳಿಯ ಬೆವಿಕಂ ಕಾಲನಿಯಲ್ಲಿದ್ದ ಬೆಸ್ಕಾಂ ಕಾರ್ಯ ಮತ್ತು ಪಾಲನಾ ಉಪ ವಿಭಾಗದ ಕಚೇರಿಯನ್ನು ಜಿಲ್ಲಾಧಿಕಾರಿ ಕಚೇರಿ ಸಮೀಪದ ನೂತನ ಕಟ್ಟಡಕ್ಕೆ ಸ್ಥಳಾಂತರಿಸಲಾಗಿದೆ. ವಿದ್ಯುತ್ ಬಿಲ್ ಪಾವತಿ ಹಾಗೂ ಇತರ ಗ್ರಾಹಕ ಸೇವೆಗಳಿಗಾಗಿ ಕಚೇರಿಗೆ ಭೇಟಿ ನೀಡಬಹುದೆಂದು ಬೆಸ್ಕಾಂ ನಗರ ಉಪವಿಭಾಗ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ಕಚೇರಿ ಪ್ರಕಟಣೆ ತಿಳಿಸಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net