

ಗೋಣಿಕೊಪ್ಪ: ದಕ್ಷಿಣ ಕೊಡಗಿನಲ್ಲಿ ಮತ್ತೆ ಹುಲಿ ದಾಳಿ ಆರಂಭವಾಗಿದ್ದು, ಜನರು ಆತಂಕಗೊಂಡಿದ್ದಾರೆ.
ಶನಿವಾರ ತಡರಾತ್ರಿ ಪೊನ್ನಂಪೇಟೆ ಸಮೀಪದ ಬೆಸಗೂರು ಗ್ರಾಮದ ಪ್ರಕಾಶ್ ರಾಜಪ್ಪ ಗಣಪತಿ ಎಂಬುವರ ಕೊಟ್ಟಿಗೆಯಲ್ಲಿ ಕಟ್ಟಿದ ಹಸು ಮೇಲೆ ದಾಳಿ ಮಾಡಿರುವ ಹುಲಿ, ಅದನ್ನು ಕೊಂದು, ಅರೆಬರೆ ತಿಂದುಹಾಕಿದೆ. ಎರಡನೇ ಬಾರಿ ಹುಲಿ ಇವರ ಕೊಟ್ಟಿಗೆ ಮೇಲೆ ದಾಳಿ ಇಟ್ಟಿದ್ದು, ಗ್ರಾಮಸ್ಥರು ಭಯಭೀತರಾಗಿದ್ದಾರೆ. ಸ್ಥಳಕ್ಕೆ ಅರಣ್ಯಾಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದರು.
=-=-=-=-=-=-=-=-=-=-=-=-=-=-=-=-=-=-