ಬೆಳ್ಳೆಂಬೆಳಗ್ಗೆ ಎಸಿಬಿ ದಾಳಿ, ನಿರ್ಮಿತಿ ಕೇಂದ್ರದ ಅಧಿಕಾರಿ ಮಳಜಿ ಮನೆ ಮೇಲೆ ದಾಳಿ

IMG-20220316-WA0016_20220316073017321
Published on

ವಿಜಯಪುರ: ಇಲ್ಲಿನ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಗೋಪಿನಾಥ ಸಾ ಮಳಜಿ ಮನೆ ಮೇಲೆ ಬುಧವಾರ ಬೆಳಗ್ಗೆ ಎಸಿಬಿ ದಾಳಿ ನಡೆದಿದೆ.

ಎಸಿಬಿ ಎಸ್ ಪಿ ಬಿ.ಎಸ್. ನೇಮಗೌಡ ನೇತೃತ್ವದಲ್ಲಿ ದಾಳಿ ನಡೆದಿದ್ದು ದಾಖಲೆ ಪರಿಶೀಲಿಸಲಾಗುತ್ತಿದೆ.

ಒಟ್ಟು ಐದು ಮನೆ ಮೇಲೆ ದಾಳಿ ನಡೆಸಲಾಗಿದೆ.

ವಿಜಯಪುರದಲ್ಲಿನ ಮೂರು ಹಾಗೂ ಬಾಗಲಕೋಟೆ ಯಲ್ಲಿನ ಎರಡು ಮನೆಗಳ ಮೇಲೆ ದಾಳಿ ನಡೆಸಲಾಗಿದೆ.

ವಿಜಯಪುರ ಆದರ್ಶನಗರದಲ್ಲಿನ ಪಾಟೀಲ ಪ್ಲಾನೆಟ್ ಹಿಂಭಾಗದ ಮನೆಯಲ್ಲಿ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸುತ್ತಿದ್ದಾರೆ.

ಡಿವೈಎಸ್ ಪಿ ಮಂಜುನಾಥ ಗಂಗಲ್ಲ, ಇನ್ ಸ್ಪೆಕ್ಟರ್ ಗಳಾದ ಪರಮೇಶ್ವರ ಕವಟಗಿ ಮತ್ತಿತರರಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net