

ಚನ್ನರಾಯಪಟ್ಟಣ: ಮನೆಯ ಬೀಗ ಒಡೆದು ಬೆಳ್ಳಿ ಮತ್ತು ಚಿನ್ನಾಭರಣಗಳು ಕಳವು ಮಾಡಿರುವ ಘಟನೆ ಕಸಬಾ ಹೋಬಳಿ ದಡದಹಳ್ಳಿ ಗ್ರಾಮದಲ್ಲಿ ನಡೆದಿದೆ.
ಗ್ರಾಮದ ಚಲುವಯ್ಯ ಎಂಬುವರ ಪತ್ನಿ ಅ.11 ರಂದು ಮನೆಗೆ ಬೀಗ ಹಾಕಿಕೊಂಡು ಹೊಲದ ಹತ್ತಿರ ದನ ಮೇಯಿಸಲು ಹೋಗಿದ್ದರು. ವಾಪಸ್ ಬಂದು ನೋಡಿದಾಗ ಮನೆಯ ಬೀಗವನ್ನು ಕಳ್ಳರು ಯಾವುದೋ ಆಯುಧದಿಂದ ಒಡೆದು ಒಳಗೆ ಹೋಗಿ ಬೀರುವಿನಲ್ಲಿದ್ದ 11 ಗ್ರಾಂ.ನ ಎರಡು ಜೊತೆ ಚಿನ್ನದ ಓಲೆ, 3 ಗ್ರಾಂ ತೂಕದ ಮಾಂಗಲ್ಯ, ಎರಡು ಜೊತೆ ಬೆಳ್ಳಿಯ ಕಾಲು ಚೈನು, ಒಂದು ಜೊತೆ ಬೆಳ್ಳಿಯ ದೀಪಗಳನ್ನು ಕಳವು ಮಾಡಿಕೊಂಡು ಹೋಗಿದ್ದಾರೆ. ಇವುಗಳ ಬೆಲೆ ಒಟ್ಟು 62 ಸಾವಿರ ಎಂದು ಅಂದಾಜಿಸಲಾಗಿದೆ. ಚನ್ನರಾಯಪಟ್ಟಣ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಂಡಿದ್ದಾರೆ.