

ಬೋರಗಾಂವ: ಸಾಮಾನ್ಯ ಉದ್ಯಮಿಗಳಿಗೆ ಸಾಲ ಒದಗಿಸುವ ಹಾಗೂ ನಾಗರಿಕರ ಬೇಡಿಕೆಗೆ ಅನುಗುಣವಾಗಿ ಅರಿಹಂತ ಸೊಸೈಟಿ ಶಾಖೆ ಉದ್ಘಾಟಿಸಲಾಗಿದ್ದು, ಬೆಳ್ಳಿ ಉದ್ಯಮಕ್ಕೆ ಉತ್ತೇಜನ ದೊರೆಯಲಿದೆ ಎಂದು ಉದ್ಯಮಿ ಮಹಾವೀರ ಗಾಟ ಹೇಳಿದರು.
ಹುಪರಿ ನಗರದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಅರಿಹಂತ ಕೋ-ಆಪ್ ಕ್ರೆಡಿಟ್ ಸೊಸೈಟಿಯ 61ನೇ ಶಾಖೆ ಉದ್ಘಾಟಿಸಿ ಮಾತನಾಡಿದರು. ಬೆಳಗ್ಗೆ ಸುರೇಶ ನರಗಚ್ಚೆ ದಂಪತಿಯಿಂದ ಧಾರ್ಮಿಕ ಪೂಜೆ ನೆರವೇರಿತು. ಉತ್ತಮ ಪಾಟೀಲ ಮಾತನಾಡಿದರು.
ಉದ್ಯಮಿಗಳಾದ ಸುಭಾಷ ಮಾಳಿ, ಧನಂಜಯ ಮುಧಾಳೆ, ಯುವ ಉದ್ಯಮಿಗಳಾದ ಸಮೀರ ಮಾಳಿ, ಸತೀಶ ಭೋಜೆ, ತಾತ್ಯಾಸಾಹೇಬ ಖೋತ, ಬಾಹುಬಲಿ ಘಾಟ, ಶೀತಲ ಬರಗಾಲೆ, ರಮೇಶ ಗಾಟ, ಅಣ್ಣಾಸಾಹೇಬ ಮುಡಶಿಂಗೆ, ಸಂಜಯ ಪಾಟೀಲ, ಪ್ರದೀಪ ಬೇಡಕಿಹಾಳೆ, ದಿಲೀಪಕುಮಾರ ಮಾಳಿ, ಕುಬೇರ ಪಾಟೀಲ, ಭರತ ಘಾಟಗೆ, ಅಣ್ಣಾಸಾಹೇಬ ಭೋಜೆ, ಅಶುತೋಷ್ ಪಾಟೀಲ, ಮುಖ್ಯ ಶಾಖೆಯ ಸಿಇಒ ಅಶೋಕ ಬಂಕಾಪುರೆ, ಭರತ ಗುಂಡೆ ಇತರರಿದ್ದರು. ಸಂಸ್ಥೆಯ ಅಧ್ಯಕ್ಷ ಅಭಿನಂದನ ಪಾಟೀಲ ಸ್ವಾಗತಿಸಿದರು. ಶಾಖಾಧಿಕಾರಿ ಅಮೋಲ ಪಾಟೀಲ ವಂದಿಸಿದರು.