

ಮೂಡಲಗಿ: ಎನ್ಡಿಆರ್ಎ್, ಎಸ್ಡಿಆರ್ಎ್ ಮಾರ್ಗಸೂಚಿ ಅನ್ವಯ ಜಂಟಿ ಸಮೀೆ ಮಾಡಿ ಬೆಳೆ ಹಾನಿ ವಿವರಗಳನ್ನು ಪರಿಹಾರ ತಂತ್ರಾಂಶದಲ್ಲಿ ದಾಖಲಿಸಿ ರೈತರಿಗೆ ಪರಿಹಾರ ಒದಗಿಸಲಾಗುವುದು ಎಂದು ಜಿಲ್ಲಾ ಜಂಟಿ ಕೃಷಿ ನಿರ್ದೇಶಕ ಶಿವನಗೌಡ ಪಾಟೀಲ ಹೇಳಿದರು.
ಪ್ರವಾಹದಿಂದ ಹಾನಿಯಾದ ತಾಲೂಕಿನ ಲೋಳಸೂರ, ವಡೇರಹಟ್ಟಿ, ಮಸಗುಪ್ಪಿ ಗ್ರಾಮಗಳಿಗೆ ಬುಧವಾರ ಭೇಟಿ ನೀಡಿ ಮಾತನಾಡಿದರು. ಜುಲೈ ವರ್ಷಧಾರೆಯಿಂದ ಪ್ರವಾಹವಾಗಿ ನದಿ ಪಾತ್ರದಲ್ಲಿರುವ ಸುಮಾರು 17&18 ಗ್ರಾಮಗಳ ಮುಖ್ಯ ಬೆಳೆಗಳಾದ ಕಬ್ಬು, ಮೆಕ್ಕೆಜೋಳ, ಸೋಯಾಬೀನ್, ಹತ್ತಿ ಹಾನಿಯಾಗಿದೆ. ಈಗಾಗಲೇ ಕಂದಾಯ ಹಾಗೂ ಕಷಿ ಇಲಾಖೆ ಅಧಿಕಾರಿಗಳು ಜಂಟಿಯಾಗಿ ಹಾನಿ ಅಂದಾಜು ವರದಿ ಮಾಡುತ್ತಿದ್ದಾರೆ. ರೈತರ ಹೊಲಗಳಿಗೆ ತೆರಳಿ ಜಂಟಿ ಸಮೀೆ ಮಾಡಲು ತಾಲೂಕಿನಲ್ಲಿ 4 ತಂಡ ರಚಿಸಲಾಗಿದೆ ಎಂದರು.
ಹಾನಿಯಾದ ರೆತರಿಗೆ ಅನ್ಯಾಯ ಮಾಡಬಾರದು. ನದಿ ಪಾತ್ರದಲ್ಲಿ ಬೆಳೆಗಳು ಹಾನಿಯಾಗಿದ್ದು, ಸಮರ್ಪಕವಾಗಿ ಹಾಗೂ ಸರಿಯಾಗಿ ಜಂಟಿ ಸಮೀೆ ಮಾಡಲು ಅವರು ಸೂಚಿಸಿದರು. ಉದಗಟ್ಟಿ ಮತ್ತು ವಡೇರಹಟ್ಟಿ ಗ್ರಾಮಗಳ ನದಿ ಪಾತ್ರದ ರೆತರೊಡನೆ ಸಂವಾದ ನಡೆಸಿದ ಜಂಟಿ ಕೃಷಿ ನಿರ್ದೇಶಕರು, ರೆತರು ಆತಂಕ ಪಡುವ ಅಗತ್ಯವಿಲ್ಲ. ಅಧಿಕಾರಿಗಳು ಬೆಳೆ ಹಾನಿ ಸಮೀೆ ಮಾಡುತ್ತಿದ್ದು, ಪ್ರಗತಿಯಲ್ಲಿದೆ ಎಂದರು. ಗೋಕಾಕ&ಮೂಡಲಗಿ ತಾಲೂಕಿನ ಸಹಾಯಕ ಕೃಷಿ ನಿರ್ದೇಶಕ ಎಂ.ಎಂ.ನದ್ಾ, ಕೃಷಿ ಅಧಿಕಾರಿಗಳಾದ ಎಸ್.ಬಿ.ಕರಗಣ್ಣಿ, ಪರಸಪ್ಪ ಹುಲಗಬಾಳ, ಪ್ರಭು ಡೋಣಿ, ಗ್ರಾಮ ಆಡಳಿತ ಅಧಿಕಾರಿಗಳು ಇತರರಿದ್ದರು.