ಬೆಳೆಹಾನಿ ಪರಿಹಾರ,ಸಹಾಯವಾಣಿ

CTD 16 DC T. venktesh--005
Published on

ಚಿತ್ರದುರ್ಗ:ಬೆಳೆ ಹಾನಿ ಪರಿಹಾರ ಪಾವತಿ ಮಾಹಿತಿಗಾಗಿ ಜಿಲ್ಲಾಧಿಕಾರಿ,ಉಪವಿಭಾಗಾಧಿಕಾರಿ ಕಚೇರಿ ಹಾಗೂ ಜಿಲ್ಲೆಯ 6 ತಾಲೂಕು ಕಚೇರಿಗಳಲ್ಲಿ ಸಹಾಯವಾಣಿ ಆರಂಭಿಸಲಾಗಿದೆ ಎಂದು ಜಿಲ್ಲಾಧಿಕಾರಿ ಟಿ.ವೆಂಕಟೇಶ್ ತಿಳಿಸಿದ್ದಾರೆ. 2023ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಬೆಳೆ ಹಾನಿಗೆ ಸಂಬಂಧಿಸಿದಂತೆ ಜಿಲ್ಲೆಯ 1,31,776 ರೈತರಿಗೆ ಮೊದಲನೇ ಕಂತಾಗಿ ಗರಿಷ್ಠ 2000 ರೂ.ರವರೆಗೆ ಒಟ್ಟು 25,61,56,790 ರೂ.ಗಳನ್ನು ಈಗಾಗಲೇ ವಿತರಿಸಲಾಗಿದೆ.
ಪ್ರಸ್ತುತ ಎಸ್‌ಡಿಆರ್‌ಎಫ್,ಎನ್‌ಡಿಆರ್.ಎಫ್ ಮಾರ್ಗಸೂಚಿ ಪ್ರಕಾರ ಅರ್ಹ ರೈತರಿಗೆ ಗರಿಷ್ಠ 2000 ರೂ.ರವರೆಗೆ ಪರಿಹಾರ ಮೊತ್ತ ಪಾವತಿಸಿರುವುದನ್ನು ಪರಿಗಣನೆಗೆ ತೆಗೆದುಕೊಂಡು,ಇನ್ನುಳಿದ ಬಾಕಿ ಬೆಳೆಹಾನಿ ಪರಿಹಾರ(ಇನ್‌ಪುಟ್ ಸಬ್ಸಿಡಿ)ಮೊತ್ತವನ್ನು ವಿತರಿಸ ಲಾಗುವುದು. ಅದರಂತೆ ಜಿಲ್ಲೆಯ 1,17,064 ರೈತರಿಗೆ 89,31,60,013ರೂ.ಗಳನ್ನು ಡಿಬಿಟಿ ಮುಖಾಂತರ ಪಾವತಿಸಲಾಗುತ್ತಿದೆ.
ಪರಿಹಾರ ಹಣ ಪಾವತಿಗೆ ಸಂಬಂಧಿಸಿದಂತೆ ಡಿಸಿ ಕಚೇರಿ ಸಹಾಯವಾಣಿ ಸಂಖ್ಯೆ 08194-222538, ಎಸಿ ಕಚೇರಿ 08194-222413 ಹಾಗೂ ಚಿತ್ರದುರ್ಗ ತಾಲೂಕು ಕಚೇರಿ 08194-222416, ಚಳ್ಳಕೆರೆ 08195-250648,ಹಿರಿಯೂರು 08193-263226 ಹೊಸದುರ್ಗ 08199-295058,ಹೊಳಲ್ಕೆರೆ 08191-200013 ಹಾಗೂ ಮೊಳಕಾಲ್ಮೂರು ತಾಲೂಕು ಕಚೇರಿ 08198-229234 ದೂರವಾಣಿ ಸಂಖ್ಯೆಗೆ ಕರೆ ಮಾಡಿ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳಬಹುದೆಂದು ಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net