ಬೆಳೆವಿಮೆ ಕಂತು ಪಾವತಿಗೆ ಅವಧಿ  ವಿಸ್ತರಿಸಿದ ಸರ್ಕಾರ-ರೈತರಿಗೆ ಖುಷಿ

B.M.-sathish.jpg
Published on

ದಾವಣಗೆರೆ: ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ ಬೆಳೆವಿಮೆ ಪ್ರೀಮಿಯಂ ಪಾವತಿಸಲು ಜುಲೈ 31 ಇದ್ದ ಕಡೇ ದಿನಾಂಕವನ್ನು ಆಗಸ್ಟ್ 7ರವರೆಗೆ ವಿಸ್ತರಣೆ ಮಾಡಿ, ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಇದು ರೈತರಿಗೆ ಸಂತಸ ತಂದಿದೆ ಎಂದು ಎಪಿಎಂಸಿ ಮಾಜಿ ಅಧ್ಯಕ್ಷ ಕೊಳೇನಹಳ್ಳಿ ಬಿ.ಎಂ.ಸತೀಶ್ ತಿಳಿಸಿದ್ದಾರೆ.

ವಾಡಿಕೆಯಂತೆ ಮೇ ತಿಂಗಳ ಅಂತ್ಯದಲ್ಲಿ ಮುಂಗಾರು ಮಳೆ ಪ್ರಾರಂಭವಾಗಲಿಲ್ಲ. ಜೂನ್ ಮೊದಲಾರ್ಧದಲ್ಲಿ ವಾಡಿಕೆಯಷ್ಟು ಮಳೆಯಾಗದೆ ವಿಳಂಬವಾಗಿದ್ದರಿಂದ ಮುಂಗಾರು ಹಂಗಾಮಿನ ಬಿತ್ತನೆ ಕಾರ್ಯ ಚಟುವಟಿಕೆಗಳಿಗೆ ಹಿನ್ನಡೆಯಾಗಿತ್ತು.

ಜುಲೈ ಮೊದಲ ವಾರದಲ್ಲಿ ಸ್ವಲ್ಪ ಮಳೆಯಾಗಿದ್ದರಿಂದ ಬಿತ್ತನೆ ಚುರುಕಾಗಿತ್ತು. ಅಲ್ಲಿಂದ ಬಿತ್ತನೆ, ಹೊಲ ಉಳುಮೆ, ಮರು ಬಿತ್ತನೆ ಆರಂಭಗೊಂಡಿದ್ದರಿಂದ, ನಿಗದಿಯಾಗಿದ್ದ ಜುಲೈ 31 ರ ಒಳಗಾಗಿ ಬೆಳೆವಿಮೆ ಯೋಜನೆಗೆ ಕಂತು ಪಾವತಿಸಲು ಸಾಧ್ಯವಾಗಿರಲಿಲ್ಲ.

ಆದ್ದರಿಂದ 7 ದಿನಗಳ ಕಾಲ ವಿಸ್ತರಣೆ ಮಾಡಿರುವುದು ರೈತರಿಗೆ ಅನುಕೂಲವಾಗಿದೆ. ಆಗಸ್ಟ್ 7 ರೊಳಗೆ ಪ್ರೀಮಿಯಂ ಪಾವತಿಸುವ ರೈತರಿಗೆ, ಸಂಬಂಧಿಸಿದ ದಾಖಲೆಗಳನ್ನು ಸಲ್ಲಿಸಲು ಮುಂದಿನ 15 ದಿನಗಳವರೆಗೆ ಕಾಲಾವಕಾಶವೂ ದೊರೆತಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

---

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net