ಬೆಳೆಗೆರೆಗೆ ಭಾವ ಪೂರ್ಣ ಶೃದ್ದಾಂಜಲಿ

20201113_104938
Published on

ವಿಜಯಪುರ: ಖ್ಯಾತ ಬರಹಗಾರ ಹಿರಿಯ ಪತ್ರಕರ್ತ ರವಿ ಬೆಳೆಗೆರೆ‌ ನಿಧನ ಹಿನ್ನೆಲೆ ಪತ್ರಕರ್ತರು ಭಾವಪೂರ್ಣ ಶೃದ್ದಾಂಜಲಿ ಅರ್ಪಿಸಿದರು.

ನಗರದ ಮಹಾತ್ಮ ಗಾಂಧಿ ವೃತ್ತದಲ್ಲಿ ಶುಕ್ರವಾರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಹೂ ಮಾಲೆ ಅರ್ಪಿಸಲಾಯಿತು.

ವಿಜಯವಾಣಿ ಸ್ಥಾನಿಕ ಸಂಪಾದಕ ಕೆ.ಎನ್. ರಮೇಶ ಮಾತನಾಡಿ, ರವಿ ಬೆಳಗೆರೆಯಂಥ ಹಿರಿಯ ಲೇಖಕರನ್ನು ಕಳೆದುಕೊಂಡ ಕನ್ನಡ ಪತ್ರಿಕೋದ್ಯಮ ಇಂದು ಬಡವಾಗಿದೆ ಎಂದರು.

ಹಿರಿಯ ಪತ್ರಕರ್ತ ಜಿ.ಎಸ್. ಕಮತರ ಮಾತನಾಡಿ, ರವಿ ಬೆಳೆಗೆರೆ ಉತ್ತಮ ಬರಹಗಾರ ಮಾತ್ರವಲ್ಲ ಅವರೊಬ್ಬ ನಟ, ಕಲಾವಿದ, ಭಾಷಣಕಾರ ಕೂಡ ಆಗಿದ್ದರು. ರವಿ ಕಾಣದ ಜಗತ್ತನ್ನು ಈ ರವಿ ಬೆಳೆಗೆರೆ ಕಂಡಿದ್ದರೆಂದರೆ ಅತೀಶಯೋಕ್ತಿಯಲ್ಲ ಎಂದರು.

ಯುವ‌ ಮುಖಂಡ ಶರಣು ಸಬರದ ಬೆಳಗೆರೆ ಅವರೊಂದಿಗಿನ ಒಡನಾಟ ಹಂಚಿಕೊಂಡರು. ಪತ್ರಕರ್ತರಾದ ಶಿವಾನಂದ ಹಿರೇಮಠ, ರಾಜು ಪಾಟೀಲ, ಗುರುರಾಜ ಹೂಗಾರ ಮಾತನಾಡಿದರು.

ಅಶೋಕ ಯಡಹಳ್ಳಿ, ಪರಶುರಾಮ ಶಿವಶರಣ, ಶ್ರೀಶೈಲ ಕೊಟ್ಟಲಗಿ, ಮೋಹನ ಕುಲಕರ್ಣಿ, ಸಂಗಮೇಶ ಹೌದೆ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net