

ಕಲಬುರಗಿ: ಜಿಲ್ಲೆಯಲ್ಲಿ ಕಳೆದ ೩-೪ ದಿನಗಳಿಂದ ನಿರಂತರ ಮಳೆ ಬೀಳುತ್ತಿದ್ದು, ಮುಂದಿನ ೨ ರಿಂದ ೩ ದಿನಗಳವರೆಗೂ ಮಳೆ ಬರುವ ಸಾಧ್ಯತೆ ಇದೆ. ಸ್ಥಳೀಯ ನೈಸರ್ಗಿಕ ವಿಕೋಪದಡಿ ತೊಗರಿ ಹಾಗೂ ಇತರೆ ಬೆಳೆ ಹಾಳಾಗಿದ್ದಲ್ಲಿ ಕೃಷಿ ವಿಮೆ ಮಾಡಿಸಿದ ರೈತರು ಮಳೆ ಬಿದ್ದ ೭೨ ಗಂಟೆಯೊಳಗೆ ವಿಮಾ ಸಂಸ್ಥೆಯ ಟೋಲ್ ಫ್ರೀ ನಂಬರ್ ೧೮೦೦-೨೦೦-೫೧೪೨ಗೆ ಕರೆ ಮಾಡಿ ದೂರು ದಾಖಲಿಸಬೇಕು ಎಂದು ಜಂಟಿ ಕೃಷಿ ನಿರ್ದೇಶಕ ಸಮದ್ ಪಟೇಲ್ ತಿಳಿಸಿದ್ದಾರೆ. ಟೋಲ್ ಫ್ರೀ ನಂಬರ್‌ಗೆ ಸಂಪರ್ಕಕ್ಕೆ ಸಿಗದಿದ್ದಲ್ಲಿ, ಲಿಖಿತ ರೂಪವಾಗಿ ದೂರು ಬರೆದು, ವಿಮೆ ಸ್ವೀಕೃತಿ ಪತ್ರ, ಪಹಣಿ, ಆಧಾರ್ ಕಾರ್ಡ್, ಬ್ಯಾಂಕ್ ಪಾಸ್‌ಬುಕ್ ಪ್ರತಿಗಳನ್ನು ರೈತ ಸಂಪರ್ಕ ಕೇಂದ್ರಗಳಲ್ಲಿ ಸಲ್ಲಿಸಿ ಸ್ವೀಕೃತಿ ಪಡೆಯಬೇಕು. ಅಲ್ಲದೆ ಹೆಸರು, ಉದ್ದು, ಸೋಯಾ ಅವರೆ ಇತರೆ ಬೆಳೆಗಳ ಕೋಯ್ಲೋತ್ತರ ಹಾನಿಗಾಗಿ ಮಳೆಯಾದ ೭೨ ತಾಸಿನೊಳಗೆ ರೈತರು ದೂರು ಸಲ್ಲಿಸಬೇಕು. ಪಿಎಂ ಕಿಸಾನ್ ಯೋಜನೆಯಡಿ ಇ-ಕೆÀವೈಸಿ ಮಾಡಿಸದಿರುವ ರೈತರು ತುರ್ತಾಗಿ ಇ-ಕೆವೈಸಿ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಮುಂದಿನ ಕಂತಿನ ಹಣ ತಮ್ಮ ಖಾತೆಗೆ ಜಮೆ ಆಗುವುದಿಲ್ಲ ಎಂದು ಪ್ರಕಟಣೆಯಲ್ಲಿ ಹೇಳಿದ್ದಾರೆ.