ಬೆಳೆ ಹಾನಿಗೆ ಪರಿಹಾರ ನೀಡಿ

22-2
ಅತಿವೃಷ್ಟಿಯಿಂದಾದ ಬೆಳೆಹಾನಿಗೆ ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಬೆಳಗಾವಿ ತಾಲೂಕು ಘಟಕದಿಂದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟನೆ ನಡೆಯಿತು. ಅಪ್ಪಾಸಾಹೇಬ ದೇಸಾಯಿ, ಮಾರುತಿ ಕಡೇಮನಿ, ಸುಭಾಸ ದಾಯಗೋಡ ಇತರರಿದ್ದರು.
Published on

ಬೆಳಗಾವಿ: ಅತಿವೃಷ್ಟಿಯಿಂದಾಗಿ ಸೋಯಾಬೀನ್, ಆಲೂಗಡ್ಡೆ ಹಾಗೂ ಇನ್ನಿತರ ಬೆಳೆಗಳು ಹಾಳಾಗಿದ್ದು, ಸೂಕ್ತ ಪರಿಹಾರ ನೀಡಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಪದಾಧಿಕಾರಿಗಳು ಬುಧವಾರ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಭಟಿಸಿ, ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದರು. ನಿರಂತರ ಮಳೆಯಾಗಿದ್ದರಿಂದ ಬೆಳೆಗಳು ನಾಶವಾಗಿ ರೈತರು ಆರ್ಥಿಕ ಸಂಕಷ್ಟಕ್ಕೀಡಾಗಿದ್ದಾರೆ.

ಈ ಹಿಂದೆ ಲಾಕ್‌ಡೌನ್ ವೇಳೆಯಲ್ಲಿ ತರಕಾರಿ ಬೆಳೆಗಳು ಹೊಲಗಳಲ್ಲಿ ಕೊಳೆತು ಹೋಗಿದ್ದವು. ಅದಕ್ಕೆ ಸರ್ಕಾರ ಪರಿಹಾರ ನೀಡಿಲ್ಲ. ಈಗ ಮತ್ತೆ ಅತಿವೃಷ್ಟಿಯಿಂದಾಗಿ ಪ್ರಮುಖವಾಗಿ ಸೋಯಾಬೀನ್, ಆಲೂಗಡ್ಡೆ ಸೇರಿ ಹಲವಾರು ಬೆಳೆಗಳು ನಿರ್ನಾಮವಾಗಿವೆ. ಸರ್ಕಾರ ಈಗಲಾದರೂ ಸೂಕ್ತ ಪರಿಹಾರ ನೀಡಿ ರೈತರ ಸಂಕಷ್ಟಕ್ಕೆ ಸ್ಪಂದಿಸಬೇಕು ಎಂದು ಒತ್ತಾಯಿಸಿದರು. ಅಪ್ಪಾಸಾಹೇಬ ದೇಸಾಯಿ, ಮಾರುತಿ ಕಡೇಮನಿ, ಸುಭಾಸ ದಾಯಗೋಡ, ರಾಜು ಕಾಗಣಿಕರ, ರಾಮಚಂದ್ರ ಫಡಕೆ, ನಾಮದೇವ ದೂಡುಮ, ಚಂದ್ರು ರಾಜಾಯಿ, ದುಂಡಪ್ಪ ಪಾಟೀಲ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net