

ಕಲಬುರಗಿ: ಅಕಾಲಿಕ ಮಳೆಗೆ ಕಲಬುರಗಿ ತಾಲೂಕು ಸೇರಿ ಗ್ರಾಮೀಣ ವಿಧಾನಸಭೆ ಕ್ಷೇತ್ರದ ನಂದೂರ ಗ್ರಾಮದ ಹತ್ತಾರು ರೈತರ ಬಾಳೆ ಬೆಳೆಯೂ ಹಾನಿಯಾಗಿದ್ದು, ಸರ್ಕಾರ ಕೂಡಲೇ ಪರಿಹಾರ ನೀಡಬೇಕು ಎಂದು ಶಾಸಕ ಬಸವರಾಜ ಮತ್ತಿಮಡು ಮನವಿ ಮಾಡಿದರು.
ನಂದೂರ ಕೆ ಗ್ರಾಮದಲ್ಲಿ ರೈತರ ಬಾಳೆ ಬೆಳೆ ಹಾನಿಗೀಡಾದ ಜಮೀನುಗಳಿಗೆ ಗುರುವಾರ ಭೇಟಿ ನೀಡಿ ಪರಿಶೀಲಿಸಿ, ರೈತರೊಂದಿಗೆ ಚರ್ಚಿಸಿ ಮಾತನಾಡಿ, ಹಲವು ಸವಾಲುಗಳನ್ನು ಎದುರಿಸಿ, ಲಾಂತರ ರೂ. ಖರ್ಚು ಮಾಡಿ ರೈತರು ಬಾಳೆ ಬೆಳೆ ಬೆಳೆದಿದ್ದು, ಇನ್ನೇನು ಕೈಗೆ ಬರುವ ತುತ್ತು ಕೈತಪ್ಪಿದ್ದು, ತೋಟಗಾರಿಕೆ, ಕೃಷಿ ಮತ್ತು ಕಂದಾಯ ಇಲಾಖೆಯವರು ಜಂಟಿ ಸಮೀೆ ನಡೆಸಿ, ಪರಿಹಾರ ನೀಡಬೇಕು ಎಂದು ಸೂಚಿಸಿದರು.
ಸ್ಥಳದಲ್ಲೇ ತೋಟಗಾರಿಕೆ, ಕೃಷಿ, ಕಂದಾಯ ಇಲಾಖೆ ಅಧಿಕಾರಿಗಳಿಗೆ ಕರೆ ಮಾಡಿ, ಮಾತನಾಡಿ ತಕ್ಷಣ ಬೆಳೆ ಹಾನಿಯ ಪರಿಶೀಲನೆ ನಡೆಸಿ, ರೈತರಿಗೆ ಪರಿಹಾರ ಕೊಡಿಸಬೇಕು. ಪರಿಹಾರದ ಅವಕಾಶಗಳ ಬಗ್ಗೆ ಗಮನಕ್ಕೆ ತಂದರೆ ಅನುದಾನಕ್ಕೆ ಹಿರಿಯ ಅಧಿಕಾರಿಗಳು, ಸರ್ಕಾರದ ಮೇಲೆ ಒತ್ತಡ ಹೇರಲಾಗುವುದು ಎಂದು ಹೇಳಿದರು.
ಬಾಳೆ ಬೆಳೆದ ರೈತರಾದ ಶಿವಕುಮಾರ ಈರೇಗೌಡ, ಕಾಶಿರಾಯ, ಈರಣ್ಣ ಪಾಟೀಲ್, ಗುಂಡಪ್ಪ ಹನುಮಂತರಾಯ, ಚೆನ್ನಪ್ಪ ಗೊಬ್ಬುರ, ಗುರುಲಿಂಗಪ್ಪ ಮಲ್ಪೆ, ಕಿಶನ್ ರಾಠೋಡ್ ಸೇರಿ ಹಲವು ರೈತರ ಜಮೀನುಗಳಿಗೆ ಭೇಟಿ ನೀಡಿದರು. ಸುಮಾರು 70ರಿಂದ 80 ಎಕರೆ ಜಮೀನು ಹಾಳಾಗಿದ್ದು, ಪರಿಶೀಲನೆ ನಡೆಸಿದರು.
ಪ್ರಮುಖರಾದ ಶಾಂತಕುಮಾರ ಪಾಟೀಲ್, ನಾಗರಾಜ ಕಲ್ಲಾ, ಶಿವಕುಮಾರ ಅಂಬಲಗಿ, ಶಿವಕುಮಾರ ಹಿರೇಗೌಡ, ಕಲ್ಲಪ್ಪ ಅಚ್ಚಂದ, ರೇಣುಕಾ ರಾಠೋಡ, ರಾಜಕುಮಾರ ಚವ್ಹಾಣ್, ಹನುಮಂತರಾಯ ಪಾಟೀಲ್, ಸಿದ್ದು ಗೌಡ ಪಾಳಾ, ಉದಯಕುಮಾರ ಪಾಟೀಲ್ ನಾಟಿಕಲ್, ಬಸವರಾಜ ಪಾಳಾ, ಧೂಳಪ್ಪ ಹೂಗಾರ, ಕಾಶಿರಾಯ, ಅರುಣ ರಾಠೋಡ, ಬಾಬು ನಾಯಕ್ ಇತರರಿದ್ದರು.