ಬೆಳೆ ಹಾನಿ ಪರಿಹಾರಕ್ಕೆ ಆಗ್ರಹಿಸಿ ಮನವಿ

14sor4
ಸೊರಬ ರೈತರ ಬೆಳೆ ಹಾನಿಗೆ ಪರಿಹಾರ ಹಾಗೂ ಬೆಳೆ ವಿಮೆ ಮೊತ್ತ ನೀಡುವಂತೆ ಆಗ್ರಹಿಸಿ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು. ಮಂಜುನಾಥ ಗೌಡ, ಕೆ.ಈಶ್ವರಪ್ಪ ಕೊಡಕಣಿ, ಭಾಸ್ಕರ್, ನಾಗರಾಜ್ ಇತರರಿದ್ದರು.
Published on

ಸೊರಬ: ಈ ಬಾರಿ ಅವಗೂ ಮೊದಲೇ ಮಳೆ ಆರಂಭವಾದ ಹಿನ್ನೆಲೆಯಲ್ಲಿ ಬಿತ್ತನೆ ಮಾಡಲು ಸಾಧ್ಯವಾಗಿಲ್ಲ. ಮಳೆಯಿಂದ ಬಿತ್ತಿದ ಬೆಳೆ ಹಾಳಾಗಿ ರೈತರು ಆರ್ಥಿಕ ಸಂಕಷ್ಟ ಎದರಾಗಿದೆ. ಸರ್ಕಾರ ಕೂಡಲೆ ಬೆಳೆ ವಿಮೆ ಮತ್ತು ಪರಿಹಾರ ನೀಡಬೇಕು ಎಂದು ಗುರುವಾರ ತಾಲೂಕು ರೈತ ಸಂಘ ಹಾಗೂ ಹಸಿರು ಸೇನೆಯಿಂದ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಲಾಯಿತು.

ಮೇ ತಿಂಗಳಿನಿಂದಲೇ ಮಳೆ ಪ್ರಾರಂಭವಾದ ಕಾರಣ ಅನೇಕ ರೈತರು ಮೆಕ್ಕೆಜೋಳ ಕಟ್ಟಾವು ಮಾಡಲಾಗದೆ ಬೆಳೆ ಮಳೆಯ ಪಾಲಾಗಿದೆ. ನಂತರ ನಿರಂತರ ಮಳೆಯಿಂದ ಮೆಕ್ಕೆಜೋಳ ಬಿತ್ತನೆ ಮಾಡಲಾಗದೆ ಬಹಳಷ್ಟು ಭೂಮಿ ಪಾಳುಬಿದ್ದಿದೆ. ಕೆಲವರು ಬಿತ್ತಿದ ಜೋಳ, ಶುಂಠಿ ಮಳೆಗೆ ಕೊಳೆತು ಹೋಗಿವೆ. ಬೇಳೆಕಾಳು ಬಿತ್ತನೆ ಬೀಜವನ್ನು ಸರ್ಕಾರ ರೈತರಿಗೆ ಉಚಿತವಾಗಿ ನೀಡುವಂತೆ ಕೃಷಿ ಇಲಾಖೆ ಅಕಾರಿಗಳಿಗೆ ಸೂಚಿಸಬೇಕೆಂದು ಮನವಿಯಲ್ಲಿ ಒತ್ತಾಯಿಸಲಾಯಿತು.

ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಗೌರವಾಧ್ಯಕ್ಷ ಮಂಜುನಾಥ ಗೌಡ, ತಾಲೂಕು ಅಧ್ಯಕ್ಷ ಕೆ.ಈಶ್ವರಪ್ಪ ಕೊಡಕಣಿ, ಭಾಸ್ಕರ್, ನಾಗರಾಜ್, ಸೋಮಣ್ಣ, ಶಿವಕುಮಾರ್, ಶಿವಪ್ಪ, ಬಸವರಾಜಪ್ಪ ಗೌಡ, ಪಾಲಕ್ಷಪ್ಪ, ಹನುಮಂತಪ್ಪ, ಹುಚ್ಚಪ್ಪ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net