

ಕೃಷಿ ಇಲಾಖೆಯಿಂದ 4.36 ಕೋಟಿ ಹಾಗೂ ತೋಟಗಾರಿಕೆ ಇಲಾಖೆಯಿಂದ ಹೆಚ್ಚವರಿ 1 ಕೋಟಿ ಪರಿಹಾರ ನೀಡಲು ಮನವಿ: ಎಚ್.ಕೆ. ಪಾಟೀಲ
ವಿಜಯವಾಣಿ ಸುದ್ದಿಜಾಲ ಗದಗ
ನಿರಂತರ ಮಳೆಯಿಂದ ಜಿಲ್ಲೆಯಾದ್ಯಂತ ಕೃಷಿ ಮತ್ತು ತೋಟಗಾರಿಕೆ ಬೆಳೆ ಸೇರಿ ಒಟ್ಟು 1.22 ಲಕ್ಷ ಹೆಕ್ಟೇರಗೂ ಅಧಿಕ ಬೆಳೆ ಹಾನಿ ಆಗಿದೆ. ವಿಪತ್ತು ನಿರ್ವಹಣೆ ವಿಭಾಗಕ್ಕೆ (ಎನ್ಡಿಆರ್ಎ್) ಒಟ್ಟು 131.69 ಕೋಟಿ ಪರಿಹಾರ ನೀಡುವಂತೆ ಮತ್ತು ಕೃಷಿ ಇಲಾಖೆಯಿಂದ ಪ್ರತ್ಯೇಕವಾಗಿ 4.36 ಕೋಟಿ, ತೋಟಗರಿಕೆ ಇಲಾಖೆಯಿಂದ 1 ಕೋಟಿ ಪರಿಹಾರ ನೀಡುವಂತೆ ಮನವಿ ಸಲ್ಲಿಸಲಾಗಿದೆ ಎಂದು ಕಾನೂನು ಸಚಿವ ಎಚ್.ಕೆ. ಪಾಟೀಲ ಹೇಳಿದರು.
ನಗರದಲ್ಲಿ ಸೋಮವಾರ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಅವರು, ಬೆಳೆಹಾನಿ ಬಗ್ಗೆ ಅಧಿಕಾರಿಗಳೊಂದಿಗೆ ಸಭೆ ನಡೆಸಲಾಯಿತು. ಕೃಷಿ ಇಲಾಖೆ ಹಾಗೂ ತೋಟಗಾರಿಕೆ ಇಲಾಖೆಯಿಂದ ಬೆಳೆಹಾನಿ ವರದಿ ಪಡೆಯಲಾಗಿದೆ. ಜಿಲ್ಲೆಯಲ್ಲಿ ಕೃಷಿ ಇಲಾಖೆ ವ್ಯಾಪ್ತಿಯಲ್ಲಿ 1.12 ಲಕ್ಷಕ್ಕೂ ಅಧಿಕ ಹೆಕ್ಟೇರ್ ಬೆಳೆ ಮತ್ತು ತೋಟಗಾರಿಕೆ ಇಲಾಖೆ ವ್ಯಾಪ್ತಿಯಲ್ಲಿ 11 ಸಾವಿರಕ್ಕೂ ಅಧಿಕ ಹೆಕ್ಟೇರ್ ನಷ್ಟು ಬೆಳೆಹಾನಿಯಾಗಿದೆ. ಎನ್ಡಿಆರ್ಎ್ ನಿಂದ ಕೃಷಿ ಜಮೀನುಗಳಿಗಳಿ 121.33 ಕೊಟಿ ಪರಿಹಾರ ನೀಡುವಂತೆ, ಅದೇ ರೀತಿ ತೋಟಗಾರಿಕೆ ಬೆಳೆ ನಾಶಕ್ಕೆ 10.36 ಕೋಟಿ ನೀಡುವಂತೆ ಮನವಿ ಸಲ್ಲಿಸಿದ್ದೆವೆ. ಇದರ ಜತೆಗೆ ಕೃಷಿ ಇಲಾಖೆಯಿಂದ ಜಿಲ್ಲೆಯ ರೈತರಿಗೆ 4.36 ಕೋಟಿ ರೂ, ತೋಟಗಾರಿಕೆಯಿಂದ 1 ಕೋಟಿ ರೂ. ಹೆಚ್ಚುವರಿ ಪರಿಹಾರ ನೀಡುವಂತೆ ಪ್ರಸ್ತಾವನೆಯಲ್ಲಿ ಸೇರಿಸಲಾಗಿದೆ ಎಂದರು. ಪರಿಹಾರ ಬಂದ ಕೂಡಲೆ ರೈತರಿಗೆ ನೀಡುವುದಾಗಿ ಎಚ್. ಕೆ. ಪಾಟೀಲ ಬರವಸೆ ನೀಡಿದರು.
ಜಿಲ್ಲಾಧಿಕಾರಿ ಸಿ. ಎನ್. ಶ್ರೀಧರ್, ಎಸ್ಪಿ ರೋಹನ್ ಜಗದೀಶ್, ಎಡಿಸಿ ಡಾ. ದುರಗೇಶ್, ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಅಧಿಕಾರಿಗಳು ಇದ್ದರು.
= = = =
ಜಿಲ್ಲೆಯಲ್ಲಿ 17ಸಾವಿರಕ್ಕೂ ಅನರ್ಹರಿಗೆ ಸೌಲಭ್ಯ: ಉಪ ತಹಸೀಲ್ದಾರ ಅಮಾನತು: ಎಚ್.ಕೆ. ಪಾಟೀಲ
ಗದಗ: ಜಿಲ್ಲೆಯಲ್ಲಿ ಒಟ್ಟು 17,997 ಅನರ್ಹರರಿಗೆ ಪಿಂಚಣಿ ಸೇರಿದಂತೆ ಇತರೆ ಸೌಲಭ್ಯ ನೀಡಲಾಗಿದೆ ಎಂದು ತಿಳಿದು ಬಂದಿದೆ. ಅದರ ಭಾಗವಾಗಿ ಅರ್ಹರಿಗೆ ಸಿಗಬೇಕಾದ ಸರ್ಕಾರದ ಸೌಲಭ್ಯಗಳು ಅನರ್ಹರರಿಗೆ ಸಿಗುತ್ತಿವೆ ಎಂಬ ದೂರಿನ ಆಧಾರ ಮೇಲೆ ಪರಿಶೀಲನೆ ನಡೆಸಿ ಗದಗ ಉಪ ತಹಸೀಲ್ದಾರ ಡಿ. ಟಿ. ವಾಲ್ಮೀಕಿ ಅವರನ್ನು ಅಮಾನತು ಮಾಡಲಾಗಿದೆ ಎಂದು ಎಚ್.ಕೆ. ಪಾಟೀಲ ಹೇಳಿದರು. ಗದಗ ಉಪ ತಹಶಿಲ್ದಾರ ಕಚೇರಿಯಲ್ಲಿ ಜನರಿಂದ ಹಣ ಪಡೆದು ಅನರ್ಹರರಿಗೆ ಅನೇಕ ಸೌಲಭ್ಯಗಳು ನೀಡುತ್ತಿರುವುದು ಬೆಳಕಿಗೆ ಬಂದಿದೆ. 30 ವರ್ಷದವರಿಗೆ ಪಿಂಚಣಿ, ಕಡಿಮೆ ವಯಸ್ಸಿನವರಿಗೆ ವೃದ್ದಾಪ್ಯ ವೇತನ, ಪತಿ ಇದ್ದವರಿಗೂ ವಿಧವಾ ವೇತನ ಹೀಗೆ ಅನೇಕ ಸೌಲಭ್ಯಗಳು ನೀಡುವುದು ಬೆಳಕಿಗೆ ಬಂದಿತ್ತು. ಉಪ ತಹಸೀಲ್ದಾರ ಡಿ.ಟಿ. ವಾಲ್ಮಿಕಿ ಅವರ ಮೇಲೆ ಅಧಿಕಾರ ರ್ದುಬಳಕೆ ಆರೋಪ ಇದೆ. ಸ್ವತಃ ನಾನೇ ಕಚೇರಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದೇವೆ. ಸರ್ಕಾರದ ಪಿಂಚಣಿ ಸೇರಿದಂತೆ ಅನೇಕ ಸೌಲಭ್ಯಗಳನ್ನು ನೀಡುವ ದೊಡ್ಡದಾದ ಜಾಲ ಪತ್ತೆಯಾಗಿದೆ. ಅದಕ್ಕೆ ಕಡಿವಾಣ ಹಾಕುತ್ತಿದ್ದೇವೆ. ಡಿ. ಟಿ. ವಾಲ್ಮಿಕಿ ಅವರನ್ನು ಅಮಾನತು ಮಾಡಿ ವಿಚಾರಣೆಗೆ ಒಳಪಡಿಸಲಾಗಿದೆ. ಸೂಕ್ತ ಕಾನೂನು ಕ್ರಮ ಕೈಗೊಳ್ಳುತ್ತೇವೆ ಎಂದರು.
ಸಿ. ಎನ್. ಶ್ರೀಧರ, ಎಸ್ಪಿ ರೋಹನ್ ಜಗದೀಶ್, ಎಡಿಸಿ ದುರಗೇಶ, ಗದಗ ತಹಸೀಲ್ದಾರ ಶ್ರೀನಿವಾಸ ಕುಲಕಣಿರ್ ಸೇರಿದಂತೆ ಅನೇಕ ಅಧಿಕಾರಿಗಳು ಇದ್ದರು .