

ಮೇಲ್ವಿಚಾರಕರು ರೈತರ ಜಮೀನು ಬೆಳೆಗಳ ಮಾಹಿತಿಯನ್ನು ನಿಖರವಾಗಿ ನಮೂದಿಸಬೇಕು ಎಂದು ಡಿಸಿ ಪ್ರಶಾಂತ ಕುಮಾರ ಮಿಶ್ರಾ ಹೇಳಿದರು.
ನಗರದ ಡಿಸಿ ಕಚೇರಿಯಲ್ಲಿ ಬೆಳೆ ಸಮೀಕ್ಷೆಯ ಕುರಿತು ಜಿಲ್ಲೆಯ ಎಲ್ಲ ತಹಸೀಲ್ದಾರ್ರೊಂದಿಗೆ ವಿಡೀಯೋ ಸಂವಾದ ಸಭೆಯಲ್ಲಿ ಮಾತನಾಡಿದರು. ಇದಕ್ಕೆ ಆಯಾ ತಾಲೂಕು ತಹಸೀಲ್ದಾರರು ನಿಗಾವಹಿಸಬೇಕು. ಬೆಳೆ ಸಮೀಕ್ಷೆ ಪ್ರಕ್ರಿಯೆಯನ್ನು ಮೊಬೈಲ್ ಆ್ಯಪ್ ಬಳಸಿ ಮಾಡಲಾಗುತ್ತಿದ್ದು, ಗ್ರಾಮ ನಕಾಶೆ ಅಳವಡಿಸಿರುವುದರಿಂದ ಆಯಾ ತಾಕಿನ ಗಡಿ ರೇಖೆಯೊಳಗೆ ಹೋಗಿ ಜಿಪಿಎಸ್ ನಿಖರತೆ ಪಡೆದು ಛಾಯಾಚಿತ್ರದೊಂದಿಗೆ ಬೆಳೆಯ ವಿವರಗಳನ್ನು ದಾಖಲು ಮಾಡಬೇಕು. ಆಯಾ ತಾಕಿನಲ್ಲಿ ಎಲ್ಲಾ ಬೆಳೆಗಳ ವಿವರಗಳನ್ನು ಕಡ್ಡಾಯವಾಗಿ ದಾಖಲು ಮಾಡಬೇಕು ಎಂದರು. ಬೆಳೆ ಸಮೀಕ್ಷೆಯ ಕಾರ್ಯವು ಸೆ.31 ರ ವರೆಗೆ ನಡೆಯಲಿದ್ದು, ಗ್ರಾಮವಾರು ಪಟ್ಟಿಮಾಡಿಕೊಂಡು ಗುರಿ ನಿಗದಿಪಡಿಸಿ ಪೂರ್ಣಗೊಳಿಸಬೇಕು. ಸಂಬಂಧಪಟ್ಟ ಅಧಿಕಾರಿಗಳು ವಾರಕ್ಕೊಮ್ಮೆ ವರದಿ ಸಲ್ಲಿಸಬೇಕು ಎಂದರು.