ಬೆಳೆ ವಿಮೆ ಹಣ ಜಮಾ ಮಾಡಿ

1905klb02
Published on

ಕಲಬುರಗಿ: ಜಿಲ್ಲೆಯಲ್ಲಿ ೨೦೨೪&೨೫ನೇ ಸಾಲಿನಲ್ಲಿ ಅತಿವೃಷ್ಟಿ, ನೆಟೆರೋಗದಿಂದ ತೊಗರಿ ಸೇರಿ ಇತರೆ ಬೆಳೆಗಳು ಹಾಳಾಗಿದ್ದು, ವಿಮೆ ಹಣ ಕಟ್ಟಿದ ರೈತರಿಗೆ ವಿಮೆ ಹಣ ಬಿಡುಗಡೆ ಮಾಡಬೇಕು ಎಂದು ಆಗ್ರಹಿಸಿ ನಗರದ ಜಗತ್​ ವೃತ್ತದಲ್ಲಿ ನವ ರ‍್ನಾಟಕ ರೈತ ಸಂದಿಂದ ಸೋಮವಾರ ಸಾಂಕೇತಿಕ ಧರಣಿ ನಡೆಸಲಾಯಿತು.

ಜಿಲ್ಲೆಯಲ್ಲಿ ೨,೩೬,೯೩೩ ರೈತರಿಗೆ ೬೬೭.೭೩ ಕೋಟಿ ರೂ. ಬೆಳೆ ವಿಮೆ ಮಂಜೂರು ಮಾಡಿ ರಾಜ್ಯ ರ‍್ಕಾರವೂ ಮಾ.೨೪ರಂದು ಆದೇಶ ಹೊರಡಿಸಿತ್ತು. ಆದರೆ ಇದುವರೆಗೆ ಒಂದು ಪೈಸೆ ಹಣ ಜಮಾ ಮಾಡದೇ ಅನ್ಯಾಯ ಮುಂದುವರಿಸಿದೆ ಎಂದು ಪ್ರತಿಭಟನಾಕಾರರು ಆಕ್ರೋಶ ವ್ಯಕ್ತಪಡಿಸಿದರು.

ಸಂದ ಅಧ್ಯಕ್ಷ ದಯಾನಂದ ಪಾಟೀಲ್​ ಮಾತನಾಡಿ, ಪುನ@ ಮಳೆಗಾಲ ಆರಂಭವಾಗುತ್ತಿದ್ದು, ಬಿತ್ತನೆಗೆ ರೈತರು ಸಿದ್ಧತೆಯಲ್ಲಿ ತೊಡಗಿದ್ದಾರೆ. ರಾಜ್ಯ ರ‍್ಕಾರ ಒಂದು ರೂಪಾಯಿಯನ್ನು ಪರಿಹಾರ ನೀಡಲಿಲ್ಲ. ವಿಮೆ ಕಟ್ಟಿದ ರೈತರಿಗೆ ಕನಿಷ್ಠ ಹಣವನ್ನು ಜಮಾ ಮಾಡದೇ ಸಂಕಷ್ಟಕ್ಕೆ ಸಿಲುಕಿಸಲಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಪರಿಹಾರವನ್ನು ನೀಡಲು ರಾಜ್ಯ ರ‍್ಕಾರಕ್ಕೆ ಸಾಧ್ಯವಿಲ್ಲ. ಆದರೆ ಕನಿಷ್ಠ ಕಟ್ಟಿದ ಹಣಕ್ಕೆ ವಿಮೆಯನ್ನಾದರೂ ನೀಡಬೇಕು. ರೈತರು ಬೀಜ, ಗೊಬ್ಬರ ಖರೀದಿಸುವ ಕಾಲ ಬಂದಿದ್ದು, ಪುನ@ ಸಾಲ ಮಾಡಿ, ಆತ್ಮಹತ್ಯೆಯ ದಾರಿ ತುಳಿಯದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.

ಮುಖಂಡರಾದ ಸುರೇಶ ಗುತ್ತೇದಾರ್​, ಅಮರ ಝಳಕಿ, ಸಿದ್ರಾಮಪ್ಪ ಪಾಟೀಲ್​, ಶಾಂತಪ್ಪ ಪಾಟೀಲ್​, ಅಪ್ಪಾಸಾಬ್​ ಪಾಟೀಲ್​, ಸುರೇಂದ್ರ ಪಾಟೀಲ್​, ಭೀಮಶೆಟ್ಟಿ ಮುಕ್ಕಾ, ದೊಡ್ಡಪ್ಪ, ಲಕ್ಷಿ$್ಮಪುತ್ರ, ವಿಜಯಕುಮಾರ ಸೂಗೂರ, ಮಲ್ಲಿನಾಥ ಕೋಗನೂರ, ಸುನೀಲ ಹೀರಾಪುರ, ವಿರುಪಾ ಹಿರೇಮಠ, ಗೊಲ್ಲಾಳಪ್ಪ ಕಾಬಾ, ಶರಣಗೌಡ ಬೆಳಗುಂಪಿ, ಜಗದೇವಿ ಹೆಗಡೆ ಇತರರಿದ್ದರು.

ಬಿಜೆಪಿ ಬೆಂಬಲ: ರೈತರ ಹೋರಾಟದ ಸ್ಥಳಕ್ಕೆ ಬಿಜೆಪಿ ಮುಖಂಡರು ಭೇಟಿ ನೀಡಿ, ಧರಣಿಯಲ್ಲಿ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಶಾಸಕರಾದ ಬಸವರಾಜ ಮತ್ತಿಮಡು, ಡಾ.ಅವಿನಾಶ ಜಾಧವ್​, ಮಾಜಿ ಶಾಸಕ ರಾಜಕುಮಾರ ಪಾಟೀಲ್​ ತೆಲ್ಕೂರ, ಬಿಜೆಪಿ ಜಿಲ್ಲಾಧ್ಯಕ್ಷ ಅಶೋಕ ಬಗಲಿ ಸೇರಿ ಮುಖಂಡರು ಪಾಲ್ಗೊಂಡು, ಬೆಳೆ ವಿಮೆ ಜಮಾ ಮಾಡಿಸಲು ವಿಲವಾದ ರಾಜ್ಯ ರ‍್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net