ಬೆಳೆ ವಿಮೆ ಪಾವತಿಸಲು 31 ಕೊನೆ

Farmers-Day
Published on

ಬೆಳಗಾವಿ: ಮುಂಗಾರು&2023ನೇ ಹಂಗಾಮಿಗೆ ಮರು ವಿನ್ಯಾಸಗೊಳಿಸಲಾದ ಹವಾಮಾನ ಆಧಾರಿತ ಬೆಳೆ ವಿಮಾ ಯೋಜನೆಯಡಿ ದ್ರಾ, ದಾಳಿಂಬೆ, ಮಾವು ಹಾಗೂ ಹಸಿ ಮೆನಸಿಣಕಾಯಿ ಬೆಳೆಗಳಿಗೆ ಜುಲೈ 31ರೊಳಗಾಗಿ ಬೆಳೆ ವಿಮೆ ಪಾವತಿಸಬಹುದಾಗಿದೆ.

ಪ್ರತಿ ಹೆಕ್ಟೇರ್​ ದ್ರಾ ಬೆಳೆಗೆ 14,000 ರೂ., ದಾಳಿಂಬೆಗೆ 6,350 ರೂ., ಮಾವು ಬೆಳೆಗೆ 4,000 ರೂ. ಹಾಗೂ ಹಸಿಮೆಣಸಿನಕಾಯಿ ಬೆಳೆಗೆ 3,550 ರೂ. ನಂತೆ ವಿಮಾ ಕಂತು ನಿಗದಿಯಾಗಿದ್ದು, ತಾಲೂಕು ಮತ್ತು ಹೋಬಳಿ ಮಟ್ಟದ ತೋಟಗಾರಿಕೆ ಅಧಿಕಾರಿಗಳನ್ನು ಸಂಪರ್ಕಿಸಿ, ಹತ್ತಿರದ ಬ್ಯಾಂಕ್​ ಶಾಖೆಗಳಲ್ಲಿ, ಗ್ರಾಮ&ಒನ್​ ಅಥವಾ ಸಾಮಾನ್ಯ ಸೇವಾ ಕೇಂದ್ರಗಳಲ್ಲಿ ವಿಮೆ ಕಂತು ಪಾವತಿಸಬಹುದು.

ಅಧಿಸೂಚಿತ ಬೆಳೆಗಳಿಗೆ ಸಾಲ ಪಡೆದ ರೈತರ ವಂತಿಕೆಯನ್ನು ಸಾಲ ಪಡೆದ ಬ್ಯಾಂಕ್​ಗಳಿಂದಲೇ ವಿಮಾ ಮೊತ್ತ ಕಡಿತಗೊಳಿಸಲಾಗುವುದು. ಆೇಪಣೆಗಳಿದ್ದಲ್ಲಿ ಕೂಡಲೆ ಬ್ಯಾಂಕ್​ಗಳನ್ನು ಸಂಪರ್ಕಿಸಬೇಕು. ಮಾಹಿತಿಗಾಗಿ ದೂ: ಬೆಳಗಾವಿ: 0831&2431559, ಗೋಕಾಕ: 08332&229382, ಖಾನಾಪುರ: 08336&223387, ಸವದತ್ತಿ: 08330&222082, ಅಥಣಿ: 08289&285099, ರಾಮದುರ್ಗ: 08335&241512, ರಾಯಬಾಗ: 08331&225049, ಹುಕ್ಕೇರಿ: 08333&265915 ಚಿಕ್ಕೋಡಿ: 08338&274943, ಬೈಲಹೊಂಗಲ: 08288&233758 ಗೆ ಸಂಪರ್ಕಿಸಬಹುದು ಎಂದು ಪ್ರಕಟ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net