ಬೆಳೆ ವಿಮೆ ಪಾವತಿಗೆ ಒತ್ತಾಯ

Raithasangha
Published on

ಚಿತ್ರದುರ್ಗ: ಜಿಲ್ಲೆಯಲ್ಲಿ 2022-23ನೇ ಸಾಲಿನಲ್ಲಿ ಅತಿವೃಷ್ಟಿ ಉಂಟಾಗಿ ತೋಟಗಾರಿಕೆ ಬೆಳೆಗಳು ಸಂಪೂರ್ಣ ಹಾಳಾಗಿದ್ದು, ಬೆಳೆ ವಿಮೆ ಪಾವತಿಸಿರುವ ಎಲ್ಲ ರೈತರಿಗೂ ಶೇ 100ರಷ್ಟು ವಿಮಾ ಮೊತ್ತ ಜಮಾ ಆಗುವಂತೆ ಕ್ರಮವಹಿಸಬೇಕು ಎಂದು ತೋಟಗಾರಿಕೆ ಇಲಾಖೆಯಲ್ಲಿ ಗುರುವಾರ ನಡೆದ ಸಭೆಯಲ್ಲಿ ರೈತ ಮುಖಂಡರು ಒತ್ತಾಯಿಸಿದರು.

ಮುಖಂಡರಾದ ಈಚಘಟ್ಟ ಸಿದ್ದವೀರಪ್ಪ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ್, ನಿಜಲಿಂಗಪ್ಪ, ತಿಪ್ಪೇಸ್ವಾಮಿ, ಶಶಿಧರ, ರವಿಕುಮಾರ್, ಶಿವಶಂಕರಪ್ಪ, ನಾಗರಾಜ್ ರೆಡ್ಡಿ, ಕೊಟ್ರು ಬಸಪ್ಪ, ಎಚ್.ಆರ್.ಬಸವರಾಜಪ್ಪ, ವೀರಭದ್ರಪ್ಪ, ನಾಗರಾಜ್, ಮಂಜುನಾಥ್, ರಾಜಣ್ಣ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net